Mandya News: ಮಂಡ್ಯ:ದೇವಸ್ಥಾನದ ಅಭಿವೃದ್ಧಿ ನಿರ್ವಹಣೆ ಹೆಸರಿನಲ್ಲಿ ಲಕ್ಷ ಲಕ್ಷ ಪಂಗನಾಮ ಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಕೆ.ಆರ್.ಪೇಟೆ ತಾ ಸಾಸಲು ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀ ಕ್ಷೇತ್ರ ಸಾಸಲು ಶ್ರೀ ಸೋಮೇಶ್ವರ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಸೂಕ್ತ ತನಿಖೆ ನಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಯಲುಸೀಮೆಯ ಕುಕ್ಕೆ ಎಂದೇ ಖ್ಯಾತಿಯ ಸೋಮೇಶ್ವರ ಶಂಭುಲಿಂಗೇಶ್ವರ ದೇವಾಲಯಗಳು ಮುಜರಾಯಿ ಇಲಾಖೆಗೆ ಸಂಬಂಧಿಸಿದೆ. ಆದರೂ ಕೂಡ ಇಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಗೋಲ್‌ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ನಕಲಿ ಬಿಲ್ ಸೃಷ್ಟಿಸಿ ಭಕ್ತರ 80.ಲಕ್ಷಕ್ಕೂ ಹೆಚ್ಚು ಹಣವನ್ನು ಸ್ಥಳಿಯ & ತಾಲೂಕು ಅಧಿಕಾರಿಗಳು ನುಂಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಅಭಿವೃದ್ಧಿ- ನಿರ್ವಹಣೆ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ಗೋಲ್‌ಮಾಲ್ ಮಾಡಲಾಗುತ್ತಿದೆ. ಕರ್ಮಕಾಂಡ ಬೈಲಿಗೆಳೆದ ಕೆಲ ಗ್ರಾಮಸ್ಥರ ಮೇಲೆ FIR ಹಾಕುತ್ತೇವೆ ಎಂಬ ಬೆದರಿಕೆ ಕೂಡ ಹಾಕಿದ್ದೆರನ್ನಲಾಗಿದೆ. ಹಾಗಾಗಿ ಲೂಟಿಕೋರರ ವಿರುದ್ಧ ಸೂಕ್ತ ತನಿಖೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

