Thursday, December 4, 2025

Latest Posts

Mandya News: ಬೋನಿಗೆ ಬಿದ್ದ ಚಿರತೆ: ಆತಂಕದಿಂದ ಆಚೆ ಬಂದ ಗ್ರಾಮಸ್ಥರು

- Advertisement -

Mandya News: ಮಂಡ್ಯದಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಇಷ್ಟು ದಿನ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕ“ಂಡಿತ್ತು. ಈ ಕಾರಣದಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದರು. ಅಲ್ಲದೇ ಹಲವು ಮನೆಗಳ ಜಾನುವಾರುಗಳನ್ನು ಚಿರತೆ ಬಲಿ ಪಡೆದಿತ್ತು. ಹೀಗಾಗಿ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಚಿರತೆ ಸೆರೆ ಹಿಡಿಯಲು ಆಗ್ರಹಿಸಿದ್ದರು.

ಹೀಗಾಗಿ ಅರಣ್ಯ ಇಲಾಖೆಯವರು ಚೆನ್ನಮ್ಮ ಶಿವನಂಜಯ್ಯ ಎಂಬುವವರ ಜಮೀನಿನಲ್ಲಿ ಬೋನನ್ನಿರಿಸಿದ್ದರು. ಸದ್ಯ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ಆತಂಕದಿಂದ ಆಚೆ ಬಂದಿದ್ದಾರೆ.

- Advertisement -

Latest Posts

Don't Miss