Mandya News: ಯುಗಾದಿ ಜೂಜಾಡಿದರೆ ಕಾನೂನು ಕ್ರಮ ಎಚ್ಚರಿಕೆ ನೀಡಿದ ಮಂಡ್ಯ ಎಸ್ಪಿ ಶೋಭಾರಾಣಿ..

Mandya News: ಯುಗಾಾದಿ ವೇಳೆ ಕೆಲವು ಕಡೆ ಜೂಜಾಡಲಾಗುತ್ತದೆ. ಕೆಲವರು ಇದನ್ನು ಪದ್ಧತಿ ಎಂದು ಕರೆದರೂ, ಜೂಜಾಡುವುದು ಕಾನೂನು ಬಾಹಿರ. ಹಾಗಾಗಿಯೇ ಮಂಡ್ಯ ಎಸ್ಪಿ ಡಾ.ಶೋಭಾರಾಣಿ ಈ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಜೂಜಾಡುವುದು & ಇಸ್ಪೀಟ್ ಆಡುವುದನ್ನು ಕಡ್ಡಾಯವಾಗಿ ನಿಷೇಧಿಸಿರುವ ಎಸ್ಪಿ, ಹಬ್ಬದ ಸಂದರ್ಭದಲ್ಲಿ ಜೂಜಾಡುವುದು ಕಂಡು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಯುಗಾದಿ ಹಬ್ಬದಲ್ಲಿ ಹಳ್ಳಿಗಳಲ್ಲಿ ಜೂಜಾಟ ಹೆಚ್ಚಾಗಿರುತ್ತದೆ. ಬಡವರು ತಮ್ಮ ದುಡ್ಡನ್ನು ಕಳೆದುಕೊಳ್ಳುವ ಪರಿಸ್ಥಿತಿ ಇದೆ. ಯಾವುದೇ ಲಾಡ್ಜ್, ಹೋಟೆಲ್ ರೆಸ್ಟೋರೆಂಟ್ ಎಲ್ಲೂ ಕೂಡ ಜೂಜಾಟ ಆಡಬಾರದು. ಅದಕ್ಕೆ ಜನರು ಕೂಡ ಅವಕಾಶ ಮಾಡಿಕೊಡಬಾರದು. ಆ ರೀತಿ ಜೂಜಾಟ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ. ಅಂತವರ ವಿರುದ್ದ ಕಾನೂನು ಕ್ರಮ ಕೈಗ“ಳ್ಳುತ್ತೇವೆ. ಎಲ್ಲರು ಖುಷಿಯಾಗಿ ಯುಗಾದಿ ಹಬ್ಬ ಆಚರಣೆ ಮಾಡಿ ಎಂದು ಎಚ್ಚರಿಕೆ ಕೊಟ್ಟು, ಎಸ್ಪಿ ಶೋಭಾರಾಣಿ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯ ಕೋರಿದ್ದಾರೆ.

About The Author