Mandya News: ಮಂಡ್ಯದಲ್ಲಿ ಹಾಲು oಕ್ಕೂta ಸಂಘಗಳ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯು.ಸಿ.ಶಿವಕುಮಾರ್ ಮತ್ತು ಮಾಜಿ ಎಂಎಲ್‌ಸಿ ನಾಗಮಂಗಲ ತಾಲೂಕಿನ ಎನ್.ಅಪ್ಪಾಜಿಗೌಡ ನಡುವೆ ಪೈಪೋಟಿ ಇದ್ದರೂ ಕೂಡ, ಶಿವಕುಮಾರ್ ಅವರೇ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಏಕೆಂದರೆ ಶಿವಕುಮಾರ್ ಅವರು ಮೂರು ಬಾರಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವುದರಿಂದ ಕಾಂಗ್ರೆಸ್‌ನವರು ಕೂಡ ಅವರಿಗೇ ಮ“ದಲ ಆದ್ಯತೆ ನೀಡಲಿದ್ದಾರೆ. ಅಪ್ಪಾಜಿಗೌಡರನ್ನು ಕರ್ನಾ”ಕ ಹಾಲು ಮಹಾಮಂಡಳದ ನಿರ್ದೇಶಕರನ್ನಾಗಿ ನೇಮಕ ಮಾಡಲಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ಇನ್ನು ಸಚಿವ ಚಲುವರಾಯಸ್ವಾಮಿ ಅವರಿಗೂ ಅಪ್ಪಾಜಿಗೌಡರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕು ಅಂತಿದ್ದರೂ, ಮೂರು ಬಾರಿ ಅಧ್ಯಕ್ಷರಾಗಿರುವ ಶಿವಕುಮಾರ್ ಅವರನ್ನು ಕೂಡ ಕಡೆಗಣಿಸುವಂತಿಲ್ಲ. ಹಾಗಾಗಿ ಇಬ್ಬರಿಗೂ ಬೇಸರವಾಗದಂತೆ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಲಾಗುತ್ತಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಅಪ್ಪಾಜಿಗೌಡ, ಮನಮುಲ್ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆ ಸಂಬಂಧ ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಲಾಗುತ್ತದೆ. ನಾನು ಮತ್ತು ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದೇವೆ. ಇದನ್ನು ವರಿಷ್'”ರ ಗಮನಕ್ಕೆ ತಂದಿದ್ದೇವೆ. ಅವರು ಏನೇ ತೀರ್ಮಾನ ತೆಗೆದುಕ“ಂಡರೆ ಅದಕ್ಕೆ ನಾವು ಬದ್ಧರು ಎಂದಿದ್ದಾರೆ.
ಸತತ3ನೇ ಬಾರಿ ಮನ್‌ಮುಲ್ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು, ಗೆದ್ದವರೆಲ್ಲರೂ ಅಧ್ಯಕ್ಷರಾಗಬೇಕು ಎಂದು ಆಸೆ ಪಡುವುದು ಸಹಜ. ಕಾಂಗ್ರೆಸ್‌ನ ನಿಷ್'”ಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಸಚಿವ ಚೆಲುವರಾಯಸ್ವಾಮಿಯವರ ಮೇಲೆ ನಂಂಬಿಕೆ ಇದೆ ಎಂದು ಶಿವಕುಮಾರ್ ಹೇಳಿದ್ದಾರೆ.