Mandya: ಮಂಡ್ಯ: ನಿಯತ್ತಾಗಿ ದುಡಿದು ತಿನ್ನುವವರನ್ನೂ ಜನ ಬಿಡೋದಿಲ್ಲ ಅನ್ನೋದಕ್ಕೆ ಮಂಡ್ಯದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ.
ಜೀವನಕ್ಕಾಗಿ ಜಯಮ್ಮ ಎಂಬ ಬಡ ಮಹಿಳೆ ಪೆಟ್ಟಿಗೆ ಅಂಗಡಿ ಇರಿಸಿದ್ದಳು. ಆದರೆ ದುಷ್ಕರ್ಮಿಗಳು ಅಂಗಡಿಗೆ ಬೀಗ ಹಾಕಿದ ವೇಳೆ ಬಂದು, ಬೀಗ ಮುರಿದು, ಅಲ್ಲಿದ್ದ ಬೀಡಿ ಸಿಗರೇಟ್, ಚಿಲ್ಲರೆಕಾಸು ಎಲ್ಲವೂ ಕಳ್ಳತನ ಮಾಡಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಮ್ ನಲ್ಲಿ ಈ ಘಟನೆ ನಡೆದಿದೆ. ಮೈ- ಬೆಂ ಹೆದ್ದಾರಿಯ ಸರ್ವಿಸ್ ರಸ್ತೆ ಬಳಿ ಜಯಮ್ಮ ಎಂಬುವರ ಕಬ್ಬಿಣ ಪೆಟ್ಟಿಗೆ ಅಂಗಡಿ ಇತ್ತು. ಅಂಗಡಿಯ ಬಾಗಿಲನ್ನು ಹಾರೆಯಿಂದ ಮೀಟಿ ಹಾಕಿದ್ದ ಬೀಗ ಕತ್ತರಿಸಿ ಕಳ್ಳತನ ಮಾಡಲಾಗಿದೆ.
ಘಟನೆಯಿಂದ ಜಯಮ್ಮ ಕಂಗಾಲಾಗಿದ್ದು, ಕಣ್ಣೀರು ಹಾಕಿದ್ದಾರೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಶ್ರೀರಂಗಪಟ್ಟಣ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

