- Advertisement -
Mandya News: ಮಂಡ್ಯದ ಮಳವಳ್ಳಿಯಲ್ಲಿ ಲಂಚ ಪಡೆಯುವ ವೇಳೆ ಪೋಲೀಸ್ ಪೇದೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಮಳವಳ್ಳಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಮುಖ್ಯ ಪೇದೆ ವೆಂಕಟೇಶ್ನನ್ನು ಲಂಚ ಸ್ವೀಕಾರದ ವೇಳೆ ಬಂಧಿಸಲಾಗಿದೆ.
NCR ದಾಖಲು ಮುಕ್ತಗೊಳಿಸಲು ನವೀನ್ ಎಂಬುವರಿಂದ 5 ಸಾವಿರ ಲಂಚಕ್ಕೆ ಪೇದೆ ಬೇಡಿಕೆ ಇರಿಸಿದ್ದ.
ಈ ಬಗ್ಗೆ ಅಂಚೆದೊಡ್ಡಿ ಗ್ರಾಮದ ನವೀನ್ ರಿಂದ ಲೋಕಾಯಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ತಡರಾತ್ರಿ ಪಟ್ಟಣದ ಹೋಟೆಲ್ ವೊಂದರ ಬಳಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಡಿವೈಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಆರೋಪಿ ಪೊಲೀಸ್ ಪೇದೆಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿರಿಸಿದೆ.
- Advertisement -

