Tuesday, November 18, 2025

Latest Posts

Mandya News: KRSನಲ್ಲಿ ಪದೇ ಪದೇ ಭದ್ರತಾ ಲೋಪ, ಮುಂದುವರೆದ ವಿಐಪಿಗಳ ದರ್ಬಾರ್

- Advertisement -

Mandya News: ಮಂಡ್ಯದ ಕೆಆರ್‌ಎಸ್‌ನಲ್ಲಿ ಪದೇ ಪದೇ ಭದ್ರತಾ ಲೋಪವಾಗುತ್ತಿದ್ದು, ವಿಐಪಿಗಳ ಪ್ರವೇಶಕ್ಕೆ ಅನುಕೂಲ ಮಾಡಿಕ“ಡುತ್ತಿರುವ ಆರೋಪ ಕೇಳಿಬರುತ್ತಿದೆ.

ಇಲ್ಲಿನ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೆಆರ್‌ಎಸ್ ಡ್ಯಾಮ್ ನಿರ್ಬಂಧಿತ ಪ್ರದೇಶವಾದರೂ ಕೂಡ, ಪ್ರಭಾವಿಗಳು ವಿಶ್ವವಿಖ್ಯಾತ ಬೃಂದಾವನ ಗಾರ್ಡನ್ ಫುಟ್‌ಪಾತ್‌ನಲ್ಲಿ ರಾಜಾರೋಷವಾಗಿ ಸೈಕ್ಲಿಂಗ್ ಮಾಡುತ್ತಿದ್ದಾರೆ.

ಅಲ್ಲದೇ ಕೆಆರ್‌ಎಸ್ ಮುಖ್ಯ ದ್ವಾರದ ಮುಂದೆಯೂ ಪ್ರಭಾವಿಗಳು ಫೋಟೋ ತೆಗೆದುಕ“ಂಡಿದ್ದಾರೆ. ಕಾವೇರಿ ಆರತಿ ನಡೆಯುವ ಸ್ಥಳದಲ್ಲಿ ಶೂ ಹಾಕಿ ಸೈಕ್ಲಿಂಗ್ ಕೂಡ ಮಾಡಿದ ಫೋಟೋ ವೈರಲ್ ಆಗಿದೆ. ಇಲ್ಲಿ ಭದ್ರತಾ ಲೋಪವಾಗಿದೆ ಎಂದು ತಿಳಿದಿದ್ದರೂ ಕೂಡ, ಅಧಿಕಾರಿಗಳು ಬಾಯಿ ಮುಚ್ಚಿ ಕುಳಿತಿದ್ದಾರೆ. ಫೋಟೋ ಕಂಡು ಜನ, ಸಾಮಾನ್ಯರಿಗ“ಂದು ನಿಯಮ, ಪ್ರಭಾವಿಗಳಿಗ“ಂದು ನಿಯಮಾನಾ ಅಂತಾ ಪ್ರಶ್ನಿಸುತ್ತಿದ್ದಾರೆ.

ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ, ಕಾವೇರಿ ನೀರಾವರಿ ನಿಗಮ, ಪೊಲೀಸ್ ಇಲಾಖೆ, ಮಂಡ್ಯ ಜಿಲ್ಲಾಡಳಿತ ಇವರೆಲ್ಲರೂ ಸೇರಿ ಕೆಆರ್‌ಎಸ್‌ಗೆ ಭದ್ರತೆ ನೀಡಬೇಕು. ಆದರೆ ಇವರೆಲ್ಲರೂ ಲೋಪದೋಷವಾದರೂ, ಮೌನವಾಗಿದ್ದಾರೆ.

- Advertisement -

Latest Posts

Don't Miss