Mandya News: ಮಂಡ್ಯ: ಮಂಡ್ಯದಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ಕಳೆದ ಒಂದು ತಿಂಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಳೆಯಿಂದ ಬೆಳೆ ಹಾನಿ ಆಗಿದೆ. ಸಿಎಂ ಜೊತೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕೊಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
ಅಲ್ಲದೇ, ಮಂಡ್ಯದಲೂ ಭಾರೀ ಮಳೆಗೆ ಶ್ರೀರಂಗಪಟ್ಟಣ ದಸರಗುಪ್ಪೆ ಸೇರಿ ಹಲವೆಡೆ ಹಾನಿಯಾಗಿದೆ. ಕೆ.ಹೆಚ್.ಬಿ ಕಾಲೋನಿಗೂ ನೀರು ನುಗ್ಗಿದೆ. ಇಲ್ಲಿ ಶಾಸಕ ಗಣಿಗ ರವಿಕುಮಾರ್ ತಡೆಗೋಡೆ ನಿರ್ಮಿಸಿ ನೀರು ನುಗ್ಗುವುದು ತಪ್ಪಿದೆ. ಇವಾಗ ಆಗಿರುವ ಹಾನಿಗೂ ತಡೆಗೋಡೆ ನಿರ್ಮಿಸಲು ತೆಂಡರ್ ಕರೆಯಲಾಗಿದೆ. ಇದು 41 ಕೋಟಿ ವೆಚ್ಚದ ಕಾಮಗಾರಿ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ..
ಗಣಿಗ ರವಿಕುಮಾರ್ ಶಕ್ತಿ ಮೀರಿ ಸಮಸ್ಯೆಗಳನ್ನು ಸರಿಪಡಿಸುವ ಕೆಲಸ ಮಾಡ್ತಿದ್ದಾರೆ. ಮಳೆ ನಮ್ಮ ಕೈನಲ್ಲಿಲ್ಲ, ಪ್ರಕೃತಿ ವಿಕೋಪ ಸಮಸ್ಯೆ ಬರುತ್ತೆ. ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸುತ್ತೇವೆ. ಇಡೀ ರಾಜ್ಯದಲ್ಲಿ 13ಲಕ್ಷ ಎಕ್ಟೇರ್ಸ್ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ 80ಎಕ್ಟೆರ್ಸ್ ಬೆಳೆ ಹಾನಿಯಾಗಿದೆ.
ನಾಲೆಗಳ ಅಭಿವೃದ್ಧಿ ಮಾಡಬೇಕಾದರೆ 3 ವರ್ಷ ಕಾಲುವೆ ನೀರು ನಿಲ್ಲಿಸಬೇಕು. ಅವಾಗ ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ. ಶಾಶ್ವತವಾಗಿ ಪರಿಹಾರ ಸಿಗುತ್ತೆ. ಜನರು ಸಹ ಒಂದು ಬೆಳೆ ತಡೆದುಕೊಳ್ಳಬೇಕು.. 2000 ಕೋಟಿ ವೆಚ್ಚ ಕಾವೇರಿ, ಹೇಮಾವತಿ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಮಂತ್ರಿ ಕೊಟ್ಟಿದ್ದಾರೆ ಎಂದು ಸಚಿವರು ಹೇಳಿದ್ದಾರೆ.
ಸಂಪೂರ್ಣವಾಗಿ ಸಮಸ್ಯೆ ಪರಿಹಾರಕ್ಕೆ ಸುಮಾರು 5ಸಾವಿರ ಕೋಟಿ ಮಂಜೂರು ಮಾಡಬೇಕಾಗುತ್ತೆ. ಮುಂದೆ ಅನುಕೂಲ ಆಗಬೇಕಾದರೆ ರೈತರು ಕನಿಷ್ಠ 2 ವರ್ಷ ಬೆಳೆ ನಿಲ್ಲಿಸಿ, ರೈತರನ್ನ ಮನವೊಲಿಸುವ ಪ್ರಯತ್ನ ಮಾಡ್ತೇವೆ.
ದೇವೇಗೌಡರ ಆರೋಗ್ಯದ ಬಗ್ಗೆ ಬೇರೆಯವರ ಮುಲಕ ವಿಚಾರಿಸಿದ್ದೇನೆ. ನೇರವಾಗಿ ಮಾತನಾಡುವ ಪರಿಸ್ಥಿತಿ ಇಲ್ಲ. ಸಾಧ್ಯವಾದರೆ ಭೇಟಿ ಮಾಡ್ತೇನೆ. ಅವರ ಆರೋಗ್ಯ ಚೇತರಿಕೆ ಆಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.