Monday, November 17, 2025

Latest Posts

Mandya News: ಮೈಷುಗರ್ ಶಾಲೆಗೆ ಶಾಲಾ ಬಸ್ ಕೊಡುಗೆ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

- Advertisement -

Mandya News: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡ್ಯಕ್ಕೆ ಆಗಮಿಸಿದ್ದು, ಮೈಷುಗರ್ ಶಾಲೆಗೆ ಭೇಟಿ ನೀಡಿದ್ದಾರೆ. ಈ ಶಾಲೆಯಲ್ಲಿ ಶಿಕ್ಷಕರಿಗೆ ಸಂಬಳ ನೀಡಲಾಗದೇ, ಆಡಳಿತ ಮಂಡಳಿ ಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸಚಿವ ಕುಮಾರಸ್ವಾಮಿ ಇಂದು ಆಡಳಿತ ಮಂಡಳಿ ಜತೆ ಸಭೆ ನಡೆಸಲಿದ್ದಾರೆ.

ಕೇಂದ್ರ ಸಚಿವ ಕುಮಾರಸ್ವಾಮಿಯವರು ಈ ಮುನ್ನ ಈ ಬಗ್ಗೆ ಮಾತನಾಡಿದ್ದು, 25 ಕೋಟಿ ಹಣ ಡೆಪಸಿಟ್ ಇಡುವುದಾಗಿ ಹೇಳಿದ್ದರು. ಇದೀಗ ಸಂಬಳದ ಸಮಸ್ಯೆ ಎದುರಾಗಿದ್ದು, ಸದ್ಯದರಲ್ಲೇ ಸಂಬಳ ಸಮಸ್ಯೆ ಬಗೆಹರಿಸುವುದಾಗಿ ಕುಮಾರಸ್ವಾಮಿ ಮಾತು ನೀಡಿದ್ದು, ಅಲ್ಲಿಯವರೆಗೂ ತಮ್ಮ ಸಂಬಳದಲ್ಲಿ ಶಾಲಾ ಶಿಕ್ಷಕರಿಗೂ ಸಂಬಳ ನೀಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಅಲ್ಲದೇ, ಮೈಷುಗರ್ ಶಾಲೆಗೆ ಹೆಚ್ಡಿಕೆ ಬಸ್ ನೀಡಿದ್ದಾರೆ. ಇಂದು ಶಾಲಾ ಆವರಣಜಲ್ಲಿ ಬಸ್‌ಗೆ ಪೂಜೆ ಸಲ್ಲಿಸಿ, ಬಸ್‌ನ್ನು ಶಾಲೆಗೆ ಹಸ್ತಾಂತರಿಸಿದ್ದಾರೆ. ಬಸ್ ಹಸ್ತಾಂತರದ ವೇಳೆ ಡಿಸಿ ಎಸ್ಪಿ,ಸೇರಿ ಜಿಲ್ಲೆಯ ಜೆಡಿಎಸ್ ಮುಖಂಡರು ಭಾಗಿಯಾಗಿದ್ದಾರೆ.

- Advertisement -

Latest Posts

Don't Miss