Mandya:ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಗ್ರಾಮದ ಸ್ಮಶಾನ ರಸ್ತೆ ಒತ್ತುವರಿ ತೆರವಿಗೆ ಆಗ್ರಹಿಸಿ ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಶ್ರೀರಂಗಪಟ್ಟಣದ ತಾಲೂಕು ಕಚೇರಿ ಮುಂದೆ ಮುಂಡುಗ ದೊರೆ ದಲಿತ ಸಮುದಾಯದವರು ಧರಣಿ ನಡೆಸಿದ್ದಾರೆ. ಈ ಧರಣಿಯಲ್ಲಿ ಗ್ರಾಮದ ಮಹಿಳೆಯರು, ಯುವಕರು, ಮುಖಂಡರೆಲ್ಲರೂ ಭಾಗಿಯಾಗಿದ್ದು, ಇಡೀ ರಾತ್ರಿ ಕಚೇರಿ ಮುಂದೆ ಧರಣಿ ನಡೆಸಿದ್ದಾರೆ.
ಕಚೇರಿ ಮುಂದೆಯೇ ಧರಣಿ ಮಾಡುವವರು ಅಡುಗೆ ಮಾಡಿ, ಆಹಾರ ತಯಾರಿಸಿ, ಸೇವಿಸಿ, ಅಲ್ಲೇ ಧರಣಿ ನಡೆಸಿದ್ದಾರೆ. ಗ್ರಾಮದ ಸ್ಮಶಾನ ರಸ್ತೆ ಒತ್ತುವರಿ ಮಾಡಿಕೊಂಡಿ ರುವವರ ಗ್ರಾಮಸ್ಥರ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅವರು,ಒತ್ತುವರಿ ರಸ್ತೆ ತೆರವು ಮಾಡಿದ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ರಸ್ತೆ ಒತ್ತುವರಿಯಿಂದಾಗಿ ಗ್ರಾಮದಲ್ಲಿ ದಲಿತರಿಗೆ ಸ್ಮಶಾನ ಸೇರಿ ರೈತರ ಜಮೀನಿಗೆ ಹೋಗಲು ರಸ್ತೆ ಇಲ್ಲದೆ ಪರದಾಟಡುವ ಸ್ಥಿತಿ ನಿರ್ಮಾಣವಾಗಿದೆ. ನ್ಯಾಯ ದೊರಕದ ಹೊರತು ಅಹೋರಾತ್ರಿ ಹೋರಾಟ ಕೈ ಬಿಡುವುದಿಲ್ಲ ಎಂದು ಧರಣಿಕಾರರು ಪಟ್ಟು ಹಿಡಿದಿದ್ದಾರೆ. ಕೊರೆಯುವ ಚಳಿಯಲ್ಲಿ ಅಹೋ ರಾತ್ರಿ ಪ್ರತಿಭಟನೆ ಮಾಡ್ತಿದ್ರು ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರಿದ್ದಾರೆ.

