- Advertisement -
ಮಂಡ್ಯ: ಕಳೆದ ಮೂರು ದಿನಗಳಿಂದ ಪಂಚರತ್ನ ರಥ ಯಾತ್ರೆ ಮಂಡ್ಯ ಜಿಲ್ಲೆಗೆ ಆಗಮಿಸಿದ್ದು ಮೊದಲು ಮಳವಳ್ಳಿ ನಂತರ ಮದ್ದೂರು ಇಂದು ಮಂಡ್ಯ ನಗರಕ್ಕೆ ಆಗಮಿಸಲಿದೆ. ಇಂದು ಹನಕೆರೆ ಮಾರ್ಗವಾಗಿ ಮಂಡ್ಯಗೆ ಆಗಮಿಸಲಿರುವ ಪಂಚರತ್ನ ರಥಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದ ಮಂಡ್ಯ ವಿಧಾನ ಸಭಾ ಕ್ಷೇತ್ರದ ಶಾಸಕರು ಎಂ ಶ್ರೀನಿವಾಸ್ ಮತ್ತು ಅವರ ಅಳಿಯ ಜೆಡಿಎಸ್ ಟಿಕೆಟ್ ಆಕಾಂಕ್ಷಿ H N ಯೋಗೇಶ್ ಬೃಹತ್ ಕೊಬ್ಬರಿ ಬೆಲ್ಲ ಹಾರದ ಮೂಲಕ ವಿವಿಧ ಕಲಾ ತಂಡಗಳ ಮೂಲಕ ಮಂಡ್ಯ ವಿಧಾನ ಸಭಾ ಕ್ಷೇತ್ರಕ್ಕೆ ಅದ್ದೂರಿಯಾಗಿ ಬರ ಮಾಡಿ ಕೊಂಡರು ಎತ್ತಿನ ಗಾಡಿ ಮೂಲಕ, ರೈತರು ಬೈಕ್ ಮೂಲಕ, ಯುವಕರು ಕಳಸದ ಮೂಲಕ ಮಹಿಳೆಯರು ಆದ್ಧೂರಿಯಾಗಿ ಬರ ಮಾಡಿಕೊಂಡರು. ಸಾಕಷ್ಟು ಜೆಡಿಎಸ್ ಮುಖಂಡರು ಅಭಿಮಾನಿಗಳು ಕಾರ್ಯಕರ್ತರು ಜಮಾಯಿಸಿ ಕುಮಾಸ್ವಾಮಿಯವರಿಗೆ ಸ್ವಾಗತ ಕೋರಿದರು.
ಕೋವಿಡ್ ನಿಯಂತ್ರಣ ಕುರಿತು ಪ್ರಧಾನಿ ಮೋದಿ ಇಂದು ಮಹತ್ತರ ಸಭೆ
- Advertisement -