Mandya News: ಮಂಡ್ಯ: ಬೂಕನಕರೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಡಿ ಗ್ರೇಡ್ ಗೆ ಇಳಿಕೆ ಹಿನ್ನಲೆ, ಮಾಜಿ ಸಿ.ಎಂ.ಬಿಎಸ್ವೈ ಹುಟ್ಟೂರು ಬೂಕನಕೆರೆ ಗ್ರಾಮದಲ್ಲಿ ಸುತ್ತಮುತ್ತಲಿನ 60 ಹಳ್ಳಿ ಜನರು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಬೂಕನ ಕೆರೆ ಗ್ರಾಮದಲ್ಲಿ, ಗ್ರಾಮದ ಆರೋಗ್ಯ ಕೇಂದ್ರವನ್ನು ಡಿ ಗ್ರೇಡ್‌ಗೆ ಇಳಿಕೆ ಮಾಡಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮದ ಸರ್ಕಲ್‌ನಲ್ಲಿ ಸಂಪರ್ಕ ರಸ್ತೆ ತಡೆದು ಪ್ರತಿಭಟಿಸಿದ್ದಾರೆ. ಡಿ ಗ್ರೇಡ್ ಆದೇಶ ಮಾಡಿದ ಆರೋಗ್ಯ ಇಲಾಖೆ ಆಯುಕ್ತ ಹರ್ಷ ಗುಪ್ತಾ ವಿರುದ್ದ ಗ್ರಾಮಸ್ಥರು ಕಿಡಿ ಕಾರಿದ್ದಾರೆ.
ಕೂಡಲೇ ಸರ್ಕಾರ ಈ ಡಿ ಗ್ರೇಡ್ ಆದೇಶ ಹಿಂಡೆಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಯಡಿಯೂರಪ್ಪ ಸಿ ಎಂ ಆಗಿದ್ದಾಗ 50 ಹಾಸಿಗೆ ಆಸ್ಪತ್ರೆಯನ್ನಾಗಿ ಮಾಡಿದ್ದರು. ಇದೀಗ ತಮ್ಮ ಗ್ರಾಮದ ಆಸ್ಪತ್ರೆಯನ್ನ ಇರುವಂತೆಯೇ ಮುಂದುವರೆಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

