Mandya News: ಮಂಡ್ಯ ಜಿಲ್ಲಾ ಕುರುಬರ ಸಂಘದ ಬಳಿ ಹೈಡ್ರಾಮಾ ನಡೆದಿದ್ದು, ಜಿಲ್ಲಾಧ್ಯಕ್ಷರಿಗೆ ಕಪ್ಪು ಮಸಿ ಬಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಮಂಡ್ಯ ಕುರುಬರ ಸಂಘದ ಜಿಲ್ಲಾಧ್ಯಕ್ಷರಾಗಿರುವ ಸುರೇಶ್, ತಮ್ಮ ಅವಧಿ ಮುಗಿದರೂ, ಇನ್ನೂ ರಾಜೀನಾಮೆ ನೀಡಲಿಲ್ಲವೆಂದು ಆರೋಪಿಸಿ, ಕೂಡಲೇ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟಿಸಿದ್ದಾರೆ. ಹಿಂಬಾಗಿಲಿನಿಂದ ಅಧಿಕಾರದಲ್ಲಿ ಮುಂದುವರೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಜಿಲ್ಲಾಧ್ಯಕ್ಷರಿಗೆ ಘೇರಾವ್ ಹಾಕಿ, ಘೋಷಣೆ ಕೂಗಿ, ಮಸಿ ಬಳಿದು ಪ್ರತಿಭಟಿಸಿದ್ದಾರೆ.
ಅಲ್ಲದೇ, ಕೂಡಲೇ ರಾಜೀನಾಮೆ ನೀಡಿ, ಬೈಲಾ ಪ್ರಕಾರ ಚುನಾವಣೆ ಮಾಡಬೇಕು. ಗೆದ್ದು ಬಂದವರು, ಕಾನೂನು ಪ್ರಕಾರ ಅಧ್ಯಕ್ಷ ಸ್ಥಾನದಲ್ಲಿ ಕೂರಬೇಕು.ಕಾನೂನುಬಾಹಿರವಾಗಿ ಅಧಿಕಾರದಲ್ಲಿ ಮುಂದುವರಿಯುವುದಕ್ಕೆ ನಾವು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಸಡನ್ ಆಗಿ ಮಾಡಿದ ಪ್ರತಿಭಟನೆ ಮಾಡಿದ್ದಕ್ಕೆ ಅಧ್ಯಕ್ಷರು ಗಲಿಬಿಲಿಯಾಗಿದ್ದು, ಪೋಲೀಸರ ರಕ್ಷಣೆಯಲ್ಲಿ ಆಚೆ ಹೋಗಿದ್ದಾರೆ.




