Mandya News: ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನು ಪೋಲೀಸರು ಬಂಧಿಸಿದ್ದಾರೆ. ಮಂಡ್ಯ ಪೂರ್ವ(East) ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಮಾಡಲಾಗಿದೆ.
ಇವು ಪ್ರತ್ಯೇಕ ಪ್ರಕರಣವಾಗಿದ್ದು, ಮಂಡ್ಯದ ಪೂರ್ವ ಠಾಣೆ ಪೊಲೀಸರಿಂದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 14 ಲಕ್ಷ ರೂ ಮೌಲ್ಯದ 27 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ.
ಮಂಡ್ಯ ತಾಲ್ಲೂಕು ಕಾಗೇಹಳ್ಳದೊಡ್ಡಿಯ ಚಂದ್ರಶೇಖರ್ 15ಕ್ಕೂ ಹೆಚ್ಚು XL ಬೈಕ್ ಕದ್ದಿದ್ದ ಆರೋಪಿಯಾಗಿದ್ದು, ರೈತರು ಮನೆ ಹಾಗೂ ಜಮೀನಿನ ಬಳಿ ಬೈಕ್ ಗಳನ್ನ ನಿಲ್ಲಿಸಿದ್ದ ಸಂದರ್ಭದಲ್ಲಿ ಕ್ಷಣಾರ್ಧದಲ್ಲಿ ಎಗರಿಸುತ್ತಿದ್ದ.
ಈತ XL ಬೈಕ್ ಗಳನ್ನೆ ಟಾರ್ಗೆಟ್ ಮಾಡಿ ಕದ್ದು ಬೇರೆಯವರಿಗೆ ಮಾರಾಟ ಮಾಡ್ತಿದ್ದ. ಆರೋಪಿತನಿಂದ ಸುಮಾರು 5.75000 ಮೌಲ್ಯದ 15 XL ಬೈಕ್ ಗಳು ವಶಕ್ಕೆ ಪಡೆಯಲಾಗಿದೆ. ಮಳವಳ್ಳಿ, ಸಾತನೂರು, ಹಲಗೂರು, ಕಿರುಗಾವಲು ಸೇರಿ ಹಲವೆಡೆ ಬೈಕ್ ಎಗರಿಸಿ ಮಾರಾಟ ಮಾಡಿದ್ದಾನೆಂಬ ಆರೋಪವಿದೆ.
ಮತ್ತೊಂದು ಪ್ರಕರಣದಲ್ಲಿ ಮೈಸೂರು ಜಿಲ್ಲೆಯ ರಿಹಾನ್ ಪಾಷ, ಸೈಯದ್ ಅಯಾನ್ ಹಾಗೂ ಮತ್ತೋರ್ಬ ಅಪ್ರಾಪ್ತರನ್ನು ಬಂಧಿಸಲಾಗಿದೆ. ಈ ಮೂವರು ಸೇರಿ ಸುಮಾರು 12 ಬೈಕ್ಗಳನ್ನು ಕದ್ದಿದ್ದರು. ಪೂರ್ವ ಪೊಲೀಸ್ ಠಾಣೆಯ ಪಿಎಸ್ಐ ಶೇಷಾದ್ರಿಕುಮಾರ್, ಸಿಬ್ಬಂದಿಗಳಾದ ಲಿಂಗರಾಜು,ಉಮರ್, ರವಿಕಿರಣ್, ಶಿವಕುಮಾರ್ ಲೋಕೇಶ್ ಒಳಗೊಂಡ ತಂಡ ರಚಿಸಲಾಗಿತ್ತು. ಇನ್ನು ಎರಡೂ ಪ್ರತ್ಯೇಕ ಪ್ರಕರಣದ ಪತ್ತೆಗೆ ತಂಡ ರಚಿಸಿದ್ದ ಮಂಡ್ಯ ಎಸ್ಪಿ. ಪ್ರಕರಣ ಬೇಧಿಸಿ ಮಾಲು ಜಪ್ತಿ ಮಾಡಿದ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ಡಾ.ಶೋಭಾರಾಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




