Mandya: ಸಿಎಂ ಪದಕ ವಿಜೇತರಾದ ಮಂಡ್ಯ ಜಿಲ್ಲೆಯ ಇಬ್ಬರು ಪೋಲೀಸರಿಗೆ ಅಭಿನಂದನೆ ಸಲ್ಲಿಸಿದ ಶೋಭಾರಾಣಿ

Mandya News: ಮಂಡ್ಯ: ಸಿಎಂ ಪದಕ ವಿಜೇತರಾದ ಮಂಡ್ಯ ಜಿಲ್ಲೆಯ ಇಬ್ಬರು ಪೋಲೀಸರಿಗೆ ಎಸ್ಪಿ ಶೋಭಾರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಇಂದು ಮಂಡ್ಯದ ಎಸ್ಪಿ ಕಚೇರಿಯಲ್ಲಿ ಪದಕ ಪಡೆದವರಿಗೆ ಕರೆಸಿ, ಶೋಭಾರಾಣಿಯವರು ಅಭಿನಂದಿಸಿದ್ದಾರೆ.  ಸಿ.ಎಂ‌.ಪದಕ ವಿಜೇತರಾದ ಶ್ರೀರಂಗಪಟ್ಟಣ ಟೌನ್ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಮಂಡ್ಯ ಸೈಬರ್ ಠಾಣೆಯ ಮುಖ್ಯ ಪೇದೆ ರೇವಣ್ಣನಿಗೆ ಹೂಗುಚ್ಛ ನೀಡಿ ಎಸ್ಪಿ ಶ್ಲಾಘಿಸಿದ್ದಾರೆ.

ಬಿ.ಜಿ.ಕುಮಾರ್ ಹಲವು ಪ್ರಕರಣಗಳನ್ನು ಬೇಧಿಸಿದ್ದು, ಇವರ ಸೇವೆ ಮತ್ತು ಕರ್ತವ್ಯ ದಕ್ಷತೆಗೆ ಸರ್ಕಾರ ಇವರಿಗೆ ಸಿಎಂ ಪದಕ ನೀಡಿದೆ. ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪದಕ ಪ್ರದಾನ ಮಾಡಿದ್ದಾರೆ.

About The Author