Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ ಜಿಲ್ಲೆಯ ದಕ್ಷ ಅಧಿಕಾರಿಯಾಗಿದ್ದಾರೆ.
ಬಿ.ಜಿ.ಕುಮಾರ್ ಹಲವು ಪ್ರಕರಣಗಳನ್ನು ಬೇಧಿಸಿದ್ದು, ಇವರ ಸೇವೆ ಮತ್ತು ಕರ್ತವ್ಯ ದಕ್ಷತೆಗೆ ಸರ್ಕಾರ ಇವರಿಗೆ ಸಿಎಂ ಪದಕ ನೀಡಿದೆ. ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪದಕ ಪ್ರದಾನ ಮಾಡಿದ್ದಾರೆ.
ಇನ್ನು ಸಿಎಂ ಪದಕ ಪಡೆದ ಬಿ.ಜಿ.ಕುಮಾರ್‌ಗೆ ಸಂಘಟನೆಗಳು, ಮುಖಂಡರು, ಸ್ನೇಹಿತರು, ಸಹೋದ್ಯೋಗಿಗಳೆಲ್ಲ ಸೇರಿ ಅಭಿನಂದನೆ ಸಲ್ಲಿಸಿದ್ದಾರೆ.




