Mandya News:
ಮುಂಬರುವ ವಿಧಾನ ಸಭೆ ಚುನಾವಣೆ ದೃಷ್ಟಿಯಿಂದ ಬೆಂಬಲಿಗರ ಸಭೆ ಕರೆದಿದ್ದು ಸಂಸದೆ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಬಗ್ಗೆ ಚರ್ಚಿಸಲು ಈ ಸಭೆಯನ್ನು ಏರ್ಪಡಿಸಲಾಗಿದೆ.ಸಂಸದೆ ಸುಮಲತಾ ಮತ್ತು ಅಂಬರೀಷ್ ಅಭಿಮಾನಿಗಳು ಮತ್ತು ಆಪ್ತರು ಸಭೆಯನ್ನು ಕರೆದಿದ್ದು, ಸುಮಲತಾ ಹಿತೈಷಿಗಳು, ಅಭಿಮಾನಿಗಳು ಮತ್ತು ಬೆಂಬಲಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.ಈಗಾಗಲೇ ತಮ್ಮ ಹಿತೈಷಿಗಳು, ಅಭಿಮಾನಿಗಳ ಅಭಿಪ್ರಾಯ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಮಾಡುವುದಾಗಿ ತಿಳಿಸಿರುವ ಸಂಸದೆ ಸುಮಲತಾ ಅಂಬರೀಶ್ ರವರು.
ಸುಮಲತಾ ಆಪ್ತರಾದ ಹನಕೆರೆ ಶಶಿ, ಬೇಲೂರು ಸೋಮಶೇಖರ್, ವಿವೇಕಾನಂದ ನೇತೃತ್ವದಲ್ಲಿ ಸಭೆ ನಡೆಯಲಿದ್ದು ವಿಧಾನ ಸಭಾ ಚುನಾವಣೆ ಸ್ಪರ್ಧೆ, ಯಾವ ಪಕ್ಷ ಸೇರ್ಪಡೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಸುಮಲತಾಗೆ ಅಭಿಪ್ರಾಯ ತಿಳಿಸಲಿದ್ದಾರೆ.
ಡಿ.ಕೆ.ಶಿ ವಿರುದ್ಧ ರಮೇಶ್ ಜಾರಕಿಹೊಳಿ ಆರೋಪ..?! ಮತ್ತೆ ಬುಗಿಲೆದ್ದ ಸಿಡಿ ಕೇಸ್..!