political news:
ಮಂಡ್ಯ :
ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ಪಕ್ಷ ಬದಲಾವಣೆಯ ಪರ್ವ ಜೋರಾಗಿದೆ.ಹಲವಾರು ನಾಯಕರು ಕೋತಿಯ ತರ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಂಪ್ ಮಾಡಿತಿದ್ದಾರೆ. ಈಗಾಗಲೆ ಹಲವು ನಾಯಕರು ಟಿಕೇಟ್ಗಾಗಿ ಪರದಾಡುತಿದ್ದಾರೆ. ಹೀಗಿರುವಾಗ ಮಂಡ್ಯದ ಗೌಡತಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಗೆಲುವನ್ನು ಸಾಧಿಸಿ ಇಷ್ಟು ದಿನ ಸಂಸದೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಆದರೆ ಈಗ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಶುರುವಾಗಲಿದ್ದು ಸುಮಲತಾ ಅವರು ಸಹ ಇಂದು ಸಕ್ಕರೆ ನಾಡು ಮಂಡ್ಯದಲ್ಲಿ ಬಿಜೆಪಿ ಸೇರುವ ಮೂಲಕ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಈ ವಿಷಯವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಸುಮಲತಾ ಬಿಜೆಪಿ ಪಕ್ಷ ಸೇರುವ ಕುರಿತು ಅಧಿಕೃತವಾಗಿ ಮಡ್ಯದಲ್ಲಿ ಘೋಷಣೆ ಮಾಡುತ್ತೇನೆಂದು ತಿಳಿಸಿದರು.
ಹಾಗೂ ಈಗಾಗಲೆ ಸುಮಲತಾ ಅವರು ಬಿಜೆಪಿ ಸೇರುವ ಕುರಿತು ಅಮಿತ್ ಷಾ, ಜೆಪಿ ನಡ್ಡಾ ಅವರ ಜೊತೆ ಪ್ರಸ್ತಾಪ ಮಾಡಿದ್ದು ಬಿಜೆಪಿ ಹೈ ಕಮಾಂಡ್ ನಿಂದ ಹಸಿರು ನಿಶಾನೆ ತೋರಿಸಿದ್ದಾರೆ. ಹಾಗಾಗಿ ಇಂದು ಮಂಡ್ಯದಲ್ಲಿ ಅಧಿಕೃತವಾಗಿ ಘೋಷಣೆ ಮಾಡುತ್ತೇನೆಂದು ಮಾಧ್ಯಮದವರ ಮುಂದೆ ಹೇಳಿದರು.
ಎಂಎಲ್ಸಿ ಪುಟ್ಟಣ್ಣ ಕಾಂಗ್ರೆಸ್ಗೆ : ರಾಜಾಜಿನಗರ ಟಿಕೆಟ್ ಆಕಾಂಕ್ಷಿಗಳಿಂದ ಪ್ರತಿಭಟನೆ
ಮುಳಬಾಗಿಲು ಕ್ಷೇತ್ರದಲ್ಲಿ ಸಮೃದ್ಧಿ ಮಂಜುನಾಥ್ ಕಹಳೆ, ಜೆಡಿಎಸ್ ಗೆಲ್ಲಿಸುವಂತೆ ಸಮೃದ್ಧಿ ಮಂಜುನಾಥ್ ಮನವಿ