- Advertisement -
ಮಂಡ್ಯ : ಕೊರೊನಾ ಸೋಂಕು ಹಿನ್ನೆಲೆ ಒಂದೆಡೆ ಜನ ಬಳಲುತ್ತಿದ್ರೆ, ಮತ್ತೊಂದೆಡೆ ಲಾಕ್ ಡೌನ್ ನಿಂದ ರೈತರ ಸ್ಥಿತಿ ಅಯೋಮಯವಾಗಿದೆ.. ಇದೀಗ ಮಂಡ್ಯ ಸಂಸದೆ ಸುಮಲತಾ ತಂಡ ರೈತರಿಂದ ತರಕಾರಿಗಳನ್ನ ಖರೀದಿ ಮಾಡಿ ಕೋವಿಡ್ ಸೋಂಕಿತ ನಿರ್ಬಂಧಿತ ಪ್ರದೇಶದ ಜನರಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ..

ಲಾಕ್ ಡೌನ್ ಆದಾಗಿನಿಂದಲೂ ಸುಮಲತಾ ಬೆಂಬಲಿಗರು ಹಸಿದವರಿಗೆ ಊಟ ಹಾಕೂವ ನೊಂದವವರಿಗೆ ಸಹಾಯ ಮಾಡುವ ಕೆಲಸ ಮಾಡ್ತಿದ್ದಾರೆ.. ಇದೀಗ ರೈತರಿಂದ ಖರೀದಿ ಮಾಡಿ ನಿರ್ಬಂಧಿತಯ ಪ್ರದೇಶಗಳಿಗೆ ಹಂಚುವ ಮೂಲಕ ಮತ್ತೊಂದು ಒಳ್ಳೆಯ ಕೆಲಸಕ್ಕೆ ಮುಂದಾಗಿದ್ದಾರೆ..
ಪ್ರವೀಣ್ ಕುಮಾರ್ ಜಿ.ಟಿ, ಕರ್ನಾಟಕ ಟಿವಿ ಮಂಡ್ಯ
- Advertisement -