ಮಂಡ್ಯ : ಕೃಷ್ಣರಾಜಪೇಟೆ ಟೌನ್ ಕ್ಲಬ್ ವತಿಯಿಂದ ಪಟ್ಟಣದ ಪುರಸಭೆ, ಪೋಲಿಸ್ ಠಾಣೆ, ತಾಲ್ಲೂಕು ಕಛೇರಿಗೆ ಸ್ಯಾನಿಟೈಸರ್, ಹ್ಯಾಂಡ್ ಗ್ಲೌಸ್ ಮತ್ತು ಮಾಸ್ಕ್ ಗಳ ವಿತರಣೆ ಮಾಡಿದ್ರು . ಕೆ.ಆರ್.ಪೇಟೆ ಪಟ್ಟಣ ಪೋಲಿಸ್ ಠಾಣೆಯಲ್ಲಿ ನಾಗಮಂಗಲ ಡಿವೈಎಸ್ ಪಿ ಕೆ.ಬಿ.ವಿಶ್ವನಾಥ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ ಅವರಿಗೆ ಸ್ಯಾನಿಟೈಸರ್ ವಿತರಿಸಿದರೆ, ಪುರಸಭೆಯ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಸತೀಶಕುಮಾರ್ ಅವರಿಗೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಗ್ಲೌಸ್ ಗಳನ್ನು ವಿತರಿಸಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕುಗಳನ್ನು ಟೌನ್ ಕ್ಲಬ್ ಅಧ್ಯಕ್ಷ ಜೆ.ಬಿ.ಬೋರೇಗೌಡ, ಕಾರ್ಯದರ್ಶಿ ಕೆ.ಟಿ.ಗಂಗಾಧರ, ಪದಾಧಿಕಾರಿಗಳಾದ ಬಿ.ಪಿ.ಅಶೋಕ್, ಎಂ.ಬಿ.ಹರೀಶ್, ಎಸ್.ಅಂಬರೀಶ್, ನೀತಿಮಂಗಲ ನಟರಾಜ್, ಪ್ರಕಾಶ್, ಕೆ.ಎಸ್.ರಾಜೇಶ್ ಮತ್ತು ಕ್ಲಬ್ ನ ಸದಸ್ಯರು ವಿತರಿಸಿದರು…
ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ನಿಯಂತ್ರಿಸಿ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು, ಜನಸಾಮಾನ್ಯರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಟೌನ್ ಕ್ಲಬ್ ಆಡಳಿತ ಮಂಡಳಿಯು ಕೆಲಸ ಮಾಡುತ್ತಿದೆ ಎಂದು ಕ್ಲಬ್ ಅಧ್ಯಕ್ಷ ಜೆ.ಬಿ.ಬೋರೇಗೌಡ, ಕಾರ್ಯದರ್ಶಿ ಕೆ.ಟಿ.ಗಂಗಾಧರ ಮತ್ತು ಪದಾಧಿಕಾರಿಗಳಾದ ಎಸ್.ಅಂಬರೀಶ್, ಎಂ.ಬಿ.ಹರೀಶ್ ತಿಳಿಸಿದರು..
ಪ್ರವೀಣ್ ಕುಮಾರ್ ಜಿಟಿ, ಕರ್ನಾಟಕ ಟಿವಿ, ಮಂಡ್ಯ

