Political News: ಮಂಡ್ಯದಲ್ಲಿಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಡಿ.ರಮೇಶ್ ಸೇರಿ ಜೆಡಿಎಸ್ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಶಾಸಕ ಕದಲೂರು ಉದಯ್ ವಿರುದ್ಧ ಕಿಡಿಕಾರಿದ್ದಾರೆ.
ಈ ವೇಳೆ ಮಾತನಾಡಿರುವ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ದೇವೇಗೌಡ್ರು-ಕುಮಾರಸ್ವಾಮಿ ಬಗ್ಗೆ ಟೀಕೆ ಮಾಡೋ ಮದ್ದೂರು ಶಾಸಕರಿಗೆ ಜ್ಞಾನ ಇಲ್ಲ. ಮದ್ದೂರು ಶಾಸಕರಿಗೆ ಮೂಟೆಗಟ್ಟಲೆ ಹಣ ಎಲ್ಲಿಂದ ಬರುತ್ತೆ? ದಯವಿಟ್ಟು ತಿಳಿಸಿ ಉದಯ್ ಎಂದು ಕೇಳಿದ್ದಾರೆ.
ಅಲ್ಲದೇ, ಕುಮಾರಸ್ವಾಮಿ, ದೇವೇಗೌಡ್ರು ಬಗ್ಗೆ ಶಾಸಕ ಉದಯ್ ಟೀಕೆ ಮಾಡಿರೋದು ಸರಿಯಲ್ಲ. ಜವಾಬ್ದಾರಿಯುತವಾದವರು ಎಚ್ಚರಿಕೆ ವಹಿಸಿ ಮಾತನಾಡಬೇಕು. ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದಂತ ವ್ಯಕ್ತಿ ದೇವೇಗೌಡ್ರು. ದೇವೇಗೌಡ್ರು ಕಟ್ಟಿದ ಪ್ರಾದೇಶಿಕ ಪಕ್ಷ ಶಾಶ್ವತವಾಗಿದೆ. ಮದ್ದೂರು ಶಾಸಕರಿಗೆ ಜ್ಞಾನ ಇದ್ಯಾ? ದೇವೇಗೌಡ್ರು ಸಾಧನೆ ದೇಶಕ್ಕೆ ಗೊತ್ತಿದೆ. ಉದಯ್ ಮಾಡಿರುವ ಸಾಧನೆ ಏನು? ಎಂದು ತಮ್ಮಣ್ಣ ಪ್ರಶ್ನಿಸಿದ್ದಾರೆ.
ನನ್ನ ಮೇಲು ಅಕ್ರಮದ ಆರೋಪ ಮಾಡಿದ್ದಾರೆ ತನಿಖೆ ಮಾಡಿಸಿ. ಅವರ ಕಡೆಯವರು ಮಾಡಿಸಿದ್ದ ನಾಲಾ ತಡೆಗೋಡೆ ಒಂದು ವರ್ಷಕ್ಕೆ ಬಿದ್ದೋಯ್ತು ಯಾಕೆ ತನಿಖೆ ಮಾಡಿಸಿಲ್ಲ. ಮತ್ತೆ ಮೂರು ಕೋಟಿ ವೆಚ್ಚದಲ್ಲಿ ಕಾಮಗಾರಿ ಬೇಕಾ? ಸೂಳೆಕೆರೆ 45 ಕೋಟಿ ವೆಚ್ಚದಲ್ಲಿ ಹೂಳು ಎತ್ತುತ್ತಿದ್ದಾರೆ. 3500 ರೂ ಗೆ ಮಣ್ಣು ಮಾರಾಟ ಮಾಡ್ತಿದ್ದಾರೆ. ಅಕ್ರಮವಾಗಿ ಮಣ್ಣ ಮಾರಾಟ ಮಾಡ್ತಿದ್ದಾರೆ. ಇದು 40% ಹಣ ಹೊಡೆಯುವ ಕಾಮಗಾರಿ ಎಂದು ತಮ್ಮಣ್ಣ ಆರೋಪಿಸಿದ್ದಾರೆ.
ದೊಡ್ಡ ದೊಡ್ಟ ನಾಯಕರು ಪ್ರತಿನಿಧಿಸಿರುವ ತಾಲ್ಲೂಕು. ಮದ್ದೂರಿನಲ್ಲಿ ಒಂದು ವರ್ಷದ ಸಾಧನಾ ಸಮಾವೇಶ ಮಾಡಿದ್ರು. ತಮ್ಮಣ್ಣನ ಸಾಧನೆಯನ್ನ ನನ್ನ ಸಾಧನೆ ಅಂತ ಶಾಸಕರು ಉದ್ಘಾಟನೆ ಮಾಡ್ತಿದ್ದಾರೆ. 485 ಕೋಟಿ ವೆಚ್ಚದ ಕಾಮಗಾರಿ ಜಾರಿ ನಾನು ಮಾಡಿದ್ದು. ಇದರ ಬಗ್ಗೆ ತನಿಖೆ ಮಾಡಿಸಿ ಯಾರ ಸಾಧನೆ ಅನ್ನೋದು ಸತ್ಯಸತ್ಯತೆ ಗೊತ್ತಾಗುತ್ತೆ ಎಂದು ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ನಾನು ಮಾಡಿದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡೋದರಲ್ಲಿ ಇವರು ನಿಸ್ಸಿಮರು ನನ್ನ ವಿರುದ್ದ ಅಕ್ರಮ ಆಸ್ತಿ ಆರೋಪ ಮಾಡ್ತಾರೆ. ನನ್ನ ಸಂಪಾದನೆ ಬಂದು ನೋಡಲಿ. ಮದ್ದೂರು ಶಾಸಕರಿಗೆ ಮೂಟೆಗಟ್ಟಲೆ ಹಣ ಎಲ್ಲಿಂದ ಬರುತ್ತೆ? ದಯವಿಟ್ಟು ಉದಯ್ ತಿಳಿಸಬೇಕು. ಮದ್ದೂರು ಕೊನೆ ಭಾಗಕ್ಕೆ ನೀರಿಲ್ಲ ಬೆಂಗಳೂರಿಗೆ 6ನೇ ಹಂತದ ನೀರು ಕೊಡ್ತಾರಂತೆ. KRS ಡ್ಯಾಂ ನಿಂದ ಹೈಟೆಕ್ ನಾಲೆ ಅಭಿವೃದ್ಧಿ ಕೆಲಸ ಯೋಜನೆ ಮಾಡಬೇಕು.
ಆಗ ಮಾತ್ರ ಮದ್ದೂರು ಕೊನೆ ಭಾಗಕ್ಕೆ ನೀರು ತಲುಪಲು ಸಾಧ್ಯ ಎಂದಿದ್ದಾರೆ ತಮ್ಮಣ್ಣ.
ಮತ ಕೊಟ್ಟ ಮತದಾರರ ಗೌರವಿಸೋದು ನಮ್ಮ ಕರ್ತವ್ಯ. ಶಾಸಕರಾಗಿ ನೀವು ಹೋರಾಟದ ಸ್ಥಳಕ್ಕೆ ಹೋಗಬೇಕು. ಇವರ ಇತಿಹಾಸ ಗೊತ್ತಿದೆ. ಇನ್ನು ಎರಡೂವರೆ ವರ್ಷ ಇದೆ ಜನರ ಕಷ್ಟ ಕೇಳಿ. ಯಾರು ಎಷ್ಟು ಅವ್ಯವಹಾರ ಮಾಡಿದ್ದಾರೆ ಬನ್ನಿ ಬಹಿರಂಗ ಚರ್ಚೆ ಮಾಡೋಣ. ನಾನು ಅಧಿಕಾರಿಯಾಗಿ ಸಾವಿರಾರು ಕೋಟಿ ಹಣ ಮಾಡಿರೋದನ್ನ ದಾಖಲೆ ಇದೆ. ಗೆಜ್ಜಲಗೆರೆಯಲ್ಲಿ ಕೃಷಿ ಭೂಮಿ ಇದೆ ಜನರು ಬದುಕು ಕಟ್ಟಿಕೊಂಡಿದ್ದಾರೆ.
ರೈತರ ಜಮೀನು ಸೈಟ್ ಆದ್ರೇ ರೈತನ ಪರಿಸ್ಥಿತಿ ಏನು? ರೈತರ ಭವಿಷ್ಯದ ಬಗ್ಗೆ ಸ್ವಲ್ಪ ಯೋಚನೆ ಮಾಡಿ. ನಾನು ಹಿಂದೆ ನಗರಸಭೆ ಬಗ್ಗೆ ಪ್ರಸ್ತಾಪವನೆ ಸಲ್ಲಿಸಿದ್ದೆ. ನಗರಸಭೆಗೆ ವಿರೋಧ ಮಾಡಿದ್ರು ಅದಕ್ಕೆ ನಿಲ್ಲಿಸಿದ್ದೆ. ಜನರ ವಿರುದ್ಧವಾಗಿ ನಾವು ಏನು ಮಾಡಬಾರದು ಎಂದು ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ಇನ್ನು ಕೈಗಾರಿಕಾ ಸ್ಥಾಪನೆ ಬಗ್ಗೆ ಹೆಚ್ಡಿಕೆಗೆ ಶಾಸಕ ಕದಲೂರು ಸವಾಲ್ ಹಾಕಿದ್ರು.. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ತಮ್ಮಣ್ಣ, ದೊಡ್ಡ ಉದ್ಯಮ ಬರಬೇಕಾದ್ರೆ ಮೂಲಭೂತ ಸೌಕರ್ಯ ಬೇಕು.
ಮೊದಲೇ ಎಲ್ಲಾ ಸೌಲಭ್ಯ ಒದಗಿಸಿ ಸೂಕ್ತ ಸ್ಥಳ ಗುರ್ತಿಸಿ ಇಟ್ಟಿದ್ರೆ ಕಂಪನಿ ಬರುತ್ತೆ. ಏನು ಮಾಡದೆ ಭೂಮಿ ಇದೆ ಅಂತ ಹೇಳೋದಲ್ಲ. ಬರಿ ಭೂಮಿ ಕೊಟ್ಟರೆ ಕೈಗಾರಿಕೆ ಬರಲ್ಲ. ಕಂಪನಿಯವರು ರಾಜ್ಯ ಸರ್ಕಾರಕ್ಕೆ ಅರ್ಜಿ ಹಾಕಬೇಕು. ಅರ್ಜಿ ಪರಿಶೀಲಿಸಿ ಕೈಗಾರಿಕೆ ತರಬೇಕು. 2 ರಿಂದ 3 ಸಾವಿರ ಲ್ಯಾಂಡ್ ಗುರ್ತಿಸಿ ಅಭಿವೃದ್ಧಿ ಮಾಡಿದ್ರೆ ಇಷ್ಟೋತ್ತಿಗೆ ಕಂಪನಿ ಬರ್ತಿದ್ದೊ. ಮಂಡ್ಯ ಜಿಲ್ಲೆಯಲ್ಲಿ ಎಲ್ಲಿ ಬೇಕಾದರೂ ಇಂಡಸ್ಟ್ರಿ ಆಗಲಿ. ಅಭಿವೃದ್ಧಿ ಆಗಬೇಕು ಅಂದ್ರೆ ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡಿ ಎಂದು ಡಿ.ಸಿ.ತಮ್ಮಣ್ಮ ಹೇಳಿದ್ದಾರೆ.




