Monday, October 13, 2025

Latest Posts

Mandya: ಆತ ಯಾರು ಸರ್ಕಾರದ ಭವಿಷ್ಯ ಹೇಳೋಕೆ..?: ಬ್ರಹ್ಮಾಂಡ ಗುರೂಜಿ ವಿರುದ್ಧ ಕದಲೂರು ಉದಯ್ ಆಕ್ರೋಶ

- Advertisement -

Mandya: ಹಾಸನಾಂಬಾ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಗುರೂಜಿ, ದೇವಿ ದರ್ಶನದ ಬಳಿಕ, ಪ್ರತೀ ವರ್ಷ ಭವಿಷ್ಯ ನುಡಿಯುತ್ತಾರೆ.

ಅದೇ ರೀತಿ ಈ ವರ್ಷವೂ ಗುರೂಜಿ ಭವಿಷ್ಯ ನುಡಿದಿದ್ದು, ಮುಂದೆ ದೇಶದ ಅಧಿಕಾರ ಸನ್ಯಾಸಿ ಕೈಗೆ ಸಿಗಲಿದೆ ಎಂದು ಹೇಳಿದ್ದಾರೆ. ಆದರೆ ಈ ಭವಿಷ್ಯದ ಹೇಳಿಕೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಮದ್ದೂರಿನಲ್ಲಿ ಈ ಹೇಳಿಕೆಗೆ ಶಾಸಕ ಕದಲೂರು ಉದಯ್ ಕೆಂಡಾಮಂಡಲರಾಗಿದ್ದಾರೆ. ಆತ ಯಾವೋನು ? ಆ ದಂಡಪಿಂಡದ ವಿಚಾರ ಬೇಡ. ಆತ ಯಾರು? ಸರ್ಕಾರದ ಭವಿಷ್ಯ ಹೇಳೋಕೆ..?
ಸರ್ಕಾರದ ಭವಿಷ್ಯನ ಈ ದೇಶದ ಜನರ ನಿರ್ಧರಿಸ್ತಾರೆ ಎಂದು ಗುರೂಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪುಕ್ಸಟೆ ರೋಲ್ ಕಾಲ್ ಮಾಡ್ಕೋಂಡು, ಜನರಿಗೆ ಮಂಕುಬೂದಿ ಎರಚಿಕೊಂಡು, ಚಿಲ್ರೆ ಕಾಸಿಲ್ಲಿ ಬದುಕ್ತಿದ್ದಾನೆ.
ಆತನ ಏನು ಸರ್ಕಾರದ ಭವಿಷ್ಯ ಹೇಳ್ತಾನೆ ಜನ ನಿರ್ಧಾರ ಮಾಡ್ತಾರೆ ಎಂದು ಉದಯ್ ಬ್ರಹ್ಮಾಂಡ ಗುರೂಜಿ ವಿರುದ್ದ ಹರಿಹಾಯ್ದಿದ್ದಾರೆ.

- Advertisement -

Latest Posts

Don't Miss