Mangaluru: ಲವ್ ಸೆಕ್ಸ್ ಧೋಕಾ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಪುತ್ರನನ್ನು ಮಹಿಳಾ ಪೋಲೀಸರು ಬಂಧಿಸಿದ್ದಾರೆ. ಪುತ್ತೂರು ಬಿಜೆಪಿ ಘಟಕದ ಮುಖಂಡರ ಮಗ ಕೃಷ್ಣ.ಜೆ.ರಾವ್(21) ಬಂಧಿತ ಆರೋಪಿಯಾಗಿದ್ದು, ಈತನ ಆರೋಗ್ಯ ತಪಾಸಣೆ ಮಾಡಿಸಲಾಗಿದೆ.
ಕೃತ್ಯ ಬೆಳಕಿಗೆ ಬಂದ ಬಳಿಕ, ಈತ ತಲೆಮರೆಸಿಕ“ಂಡಿದ್ದ. ಆದರೆ ಮೈಸೂರಿನ ಟಿ. ನರಸೀಪುರದಲ್ಲಿ ಕೃಷ್ಣನನ್ನು ಪೋಲೀಸರು ಬಂಧಿಸಿದ್ದಾರೆ. ಇನ್ನು ಈಗಾಗಲೇ ಸಂತ್ರಸ್ತ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಕೃಷ್ಣನಿಗೆ ಶಿಕ್ಷೆ ನೀಡಿ ಎಂದು ನಾನು ಹೇಳುವುದಿಲ್ಲ. ನನ್ನ ಮಗಳು ಅವನ ಮಗನಿಗೆ ಜನ್ಮ ನೀಡಿದ್ದಾಳೆ. ಹಾಗಾಗಿ ಅವರಿಬ್ಬರ ಮದುವೆ ಮಾಡಿಸಲೇಬೇಕು ಎಂದು ಯುವತಿಯ ತಾಯಿ ಹೇಳಿದ್ದಾರೆ.
ಆಗಿದ್ದೇನು..?
ಆರೋಪಿ ಕೃಷ್ಣ. ಜೆ.ರಾವ್ ಹೈಸ್ಕೂಲಿನಲ್ಲಿ ಇರುವಾಗ ಓರ್ವ ಹುಡುಗಿಯನ್ನ ಪ್ರೀತಿಸುತ್ತಿದ್ದ. ಆ ಪ್ರೀತಿ ಮುಂದುವರೆದು 2024ರಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃಷ್ಣ ಆ ಹುಡುಗಿಯನ್ನು ಮನೆಗೆ ಕರೆದುಕ“ಂಡು ಬಂದು, ಆಕೆಯ“ಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇದು 2025ರ ತನಕ ಮುಂದುವರೆದಿದ್ದು, ಆಕೆ ತಾಯಿಯಾಗುವ ಹಂತಕ್ಕೆ ಬಂದಿತ್ತು.
ಇದಾದ ಬಳಿಕ ಕೃಷ್ಣಗೆ ವಿಷಯ ತಿಳಿದಾಗ, ಆತ ಮೆಸೇಜ್‌ನಲ್ಲಿ ನೀನು ಪಪ್ಪಾಯಿ ಕಾಯಿ ತಿಂದರೆ, ನ್ಯಾಚುರಲ್ ಆಗಿ ಅಬಾರ್ಶನ್ ಆಗತ್ತೆ ಅಂತೆಲ್ಲ ಹೇಳಿದ್ದನಂತೆ. ಅಲ್ಲದೇ, ನಾನು ಸತ್ತರೆ ನಿನಗೆ ಸಮಾಧಾನವಾ ಅಂತಲೂ ಕೇಳಿದ್ದನಂತೆ. ಇದಲ್ಲದೇ, ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದನಂತೆ.
ಇದಾದ ಬಳಿಕ ಇಬ್ಬರ ಮಧ್ಯೆ ರಾಜಿ ಸಂಧಾನವಾಗಿ, ಆರೋಪಿಯ ವಿರುದ್ಧ ದೂರು ದಾಖಲು ಮಾಡಿರಲಿಲ್ಲ. ಏಕೆಂದರೆ ಕೃಷ್ಣನಿಗೆ ಇನ್ನೂ 21 ವರ್ಷ ತುಂಬಿರಲಿಲ್ಲ. ಆದರೆ ಕೆಲ ತಿಂಗಳ ಹಿಂದೆ ಕೃಷ್ಣನಿಗೆ 21 ವರ್ಷ ತುಂಬಿದ್ದರೂ, ಆತ ಮದುವೆಗೆ ಹಿಂಜರೆದಿದ್ದಾನೆ. ಅಲ್ಲದೇ ಎಸ್ಕೇಪ್ ಆಗಿದ್ದಾನೆ. ಹಾಗಾಗಿ ಆತನ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಪೋಲೀಸರು ಆರೋಪಿ ಕೃಷ್ಣನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.