Thursday, June 19, 2025

Latest Posts

`ಅರ್ಜುನ ರೆಡ್ಡಿ’ಗೆ ಜೋಡಿಯಾದ ಮಂಗಳೂರಿನ ಹುಡುಗಿ.!

- Advertisement -

ವಿಜಯ್ ದೇವರಕೊಂಡ ತೆಲಗು ಚಿತ್ರರಂಗದ ಉದಯೋನ್ಮುಖ ನಟ. ಇವರು `ನುವ್ವಿಲಾ’ ಚಿತ್ರದ ಮೂಲಕ ತೆಲುಗು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರೆ ಇವರಿಗೆ ಹೆಸರು ತಂದು ಕೊಟ್ಟಿದ್ದು ನಾನಿ ನಾಯಕನಾಗಿ ನಟಿಸಿದ `ಯವಡೇ ಸುಬ್ರಮಣ್ಯ’ ಚಿತ್ರದಿಂದ ಮೂಲಕ. `ಪೆಳ್ಳಿ ಚೂಪುಲು’ ಚಿತ್ರದ ಮೂಲಕ ನಾಯಕನಾಗಿ ಹೆಸರು ಪಡೆದರು. ಆದರೆ `ಅರ್ಜುನ ರೆಡ್ಡಿ’ ಸಿನಿಮಾ ಇವರಿಗೆ ಹೊಸ ಇಮೇಜ್ ತಂದು ಕೊಟ್ಟಿತು.

ಇದೀಗ ಪುರಿ ಜಗನ್ನಾಥ್ ಮತ್ತು ವಿಜಯ್ ದೇವರಕೊಂಡ ಕಾಂಬಿನೇಶನ್‌ನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ. ಆದರೆ ಈ ಸಿನಿಮಾಗೆ ಕರ್ನಾಟಕ ಮೂಲದ ಮಂಗಳೂರಿನ ಹುಡುಗಿಯನ್ನು ಆಯ್ಕೆ ಮಾಡಲಾಗಿದೆ. ಯಾರದು ಈ ನಟಿ ಅಂತ ಯೋಚನೆ ಮಾಡ್ತಾ ಇದ್ರೆ, ಮುಂದೆ ಓದಿ.

ಈ ಮೆಗಾ ಪ್ರಾಜೆಕ್ಟ್‌ಗೆ ಆಯ್ಕೆ ಆಗಿರುವುದು ತುಳುನಾಡಿನ ನಟಿ ಪೂಜಾ ಹೆಗ್ಡೆ. ಇನ್ನು ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಆಕ್ಷನ್ ಡ್ರಾಮಾ ಆಗಿದ್ದು, ಇದೇ ತಿಂಗಳ ಮೊದಲ ವಾರದಲ್ಲಿ ಶೂಟಿಂಗ್‌ ಮುಂಬೈನಲ್ಲಿ ಶುರು ಆಗಲಿದೆ.

ಇನ್ನು ಈ ಸಿನಿಮಾ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದು, ‘ಪುರಿ ಪ್ರಾಜೆಕ್ಟ್ ಭಾಗವಾಗಿರೋದು ಖುಷಿಯಾಗಿದೆ. ಪ್ರತಿಯೊಬ್ಬ ಭಾರತೀಯರಿಗೂ ಈ ಕಥೆ ಮನ ಮುಟ್ಟುತ್ತದೆ. ಇದು ಸವಾಲಿನ ಕಥೆಯಾಗಿದ್ದು, ಚಾರ್ಮಿ ಹಾಗೂ ಇಡೀ ತಂಡದ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.

ಪ್ರಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ 

 

 

- Advertisement -

Latest Posts

Don't Miss