Sunday, September 8, 2024

Latest Posts

ಮಂಗಳೂರು: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬೃಹತ್ ಪೆಂಡಾಲ್ ನಿರ್ಮಾಣ

- Advertisement -

Manglore News:

ಮಂಗಳೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಎರಡು ಲಕ್ಷ ಮಂದಿ ಆಸೀನರಾಗಲು ಬೇಕಾಗುವ ಪೆಂಡಾಲ್‌ ನಿರ್ಮಾಣ ಕಾಮಗಾರಿ ಕೂಳೂರಿನ ಗೋಲ್ಡ್‌ಪಿಂಚ್ ಸಿಟಿಯಲ್ಲಿ ಭರದಿಂದ ಸಾಗುತ್ತಿದೆ.

ಈಗಾಗಲೇ ಪ್ರಧಾನಿ ಮೋದಿ ಕಾರ್ಯಕ್ರಮಕ್ಕಾಗಿ ವೇದಿಕೆಯನ್ನು ಸಿದ್ದಗೊಳಿಸಲಾಗಿದೆ. ವೇದಿಕೆಯು 80 ಅಡಿ ಅಗಲ, 60 ಅಡಿ ಉದ್ದ, 20 ಅಡಿ ಎತ್ತರವನ್ನು ಹೊಂದಿದೆ. ಕಾರ್ಯಕ್ರಮ ನಡೆಯುವ ಸಂದರ್ಭ ಮಳೆ ಬಂದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುವಾಗುವಂತೆ ತಾತ್ಕಾಲಿಕ ಒಳಚರಂಡಿ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಅಲ್ಲದೆ ತಾತ್ಕಾಲಿಕ ಹೆಲಿಪ್ಯಾಡ್‌ನ್ನೂ ನಿರ್ಮಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನ ನಿಲುಗಡೆಗಾಗಿ ಪಾರ್ಕಿಂಗ್ ಸ್ಥಳವನ್ನು ಗೊತ್ತುಪಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸಭಾ ಕಾರ್ಯಕ್ರಮಕ್ಕಾಗಿ ಗೋಲ್ಡ್‌ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸಲಿದ್ದಾರೆ. ಆದರೆ ಇನ್ನೊಂದು ಮೂಲದ ಮಾಹಿತಿ ಪ್ರಕಾರ ಪ್ರಧಾನಿಯವರು ಎಲ್ಲಾ ಯೋಜನೆಗಳನ್ನು ಗೋಲ್ಡ್‌ಫಿಂಚ್ ಮೈದಾನದ ಕಾರ್ಯಕ್ರಮದ ಸ್ಥಳದಲ್ಲಿಯೇ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಪ್ರಧಾನಿ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಕೊನೆಕ್ಷಣದ ಬದಲಾವಣೆಗಳೇನಾದರೂ ಆದಲ್ಲಿ ಮುನ್ನೆಚ್ಚರಿಕೆ ಸಲುವಾಗಿ ಪ್ರಧಾನಿಯವರಿಗೆ ತಂಗಲು ಬೇಕಾದ ವ್ಯವಸ್ಥೆಗಳನ್ನೂ ಈಗಾಗಲೇ ಮಾಡಲಾಗಿದೆ. ಶಿಷ್ಟಾಚಾರದ ಪ್ರಕಾರ ಸರ್ಕ್ಯೂಟ್ ಹೌಸ್ ಮತ್ತು ಎನ್‌ಎಂಪಿಟಿ ಗೆಸ್ಟ್ ಹೌಸ್‌ಗಳಲ್ಲಿ ಈಗಾಗಲೇ ಪ್ರಧಾನಿಯವರಿಗೆ ತಂಗಲು ಬೇಕಾದ ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದೆ.

ರಾಯಚೂರಿನಲ್ಲಿ ಆರಾಧನಾ ಮಲ್ಟಿ ಸ್ಪೆಷಾಲಟಿ ಆಸ್ಪತ್ರೆ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕೆ.ಆರ್.ಪುರಂನಲ್ಲಿ ಬಿಜೆಪಿಯ ಸಾವಿರಾರು ಮಹಿಳೆಯರಿಗೆ ಬಾಗಿನ ವಿತರಣೆ

ಗುಲಾಂ ನಬಿ ಆಜಾದ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಿಗ್ಗಾಮುಗ್ಗಾ ವಾಗ್ಧಾಳಿ

- Advertisement -

Latest Posts

Don't Miss