ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಲೆತ್ನಿಸಿದ ರೌಡಿಶೀಟರ್ : ಆರೋಪಿ ಕಾಲಿಗೆ ಗುಂಡೇಟು

Manglore News:

ಮಂಗಳೂರು: ಕೊಲೆಯತ್ನ ಆರೋಪಿಯನ್ನು ಸ್ಥಳ ಮಹಜರು ನಡೆಸಲು ಕರೆದೊಯ್ದ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಹಲ್ಲೆ ನಡೆಸಿ ತಪ್ಪಿಸಲೆತ್ನಿಸಿದ ಆರೋಪಿಗೆ ಪೊಲೀಸರು‌ ಗುಂಡೇಟು ಹಾಕಿದ ಘಟನೆ ‌ಇಂದು ಮಂಗಳೂರು ‌ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ನಡೆದಿದೆ.‌ ಆರೋಪಿಯನ್ನು ಮಿಸ್ತಾ ಯಾನೆ ಮುಸ್ತಾಕ್ ಎಂದು ಗುರುತಿಸಲಾಗಿದೆ.

ಅ.19ರಂದು ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇಂದು ಸ್ಥಳ‌ ಮಜಹರು ಮಾಡಲು ಕರೆದೊಯ್ದಿದಾಗ ಆರೋಪಿಯು‌ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಲು‌ ಮುಂದಾಗಿದ್ದು, ಈ‌‌ ವೇಳೆ ‌ಪೊಲೀಸರು ಆರೋಪಿಗೆ ಗುಂಡೇಟು ಹಾಕಿ ಬಂಧಿಸಿದ್ದಾರೆ ‌ಎಂದು ತಿಳಿದು‌ ಬಂದಿದೆ.

ಇನ್ನು ಗುಂಡೇಟು ತಗುಲಿದ ಆರೋಪಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಗೆ ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿದ್ದಾರೆ.

ಬಾನು ಬಲೆಯಲ್ಲಿ ಸಿಲುಕಿದ ಶೆಟ್ರು: ಮಂಡ್ಯದಲ್ಲೊಂದು ಹನಿಟ್ರಾಪ್ ಪ್ರಕರಣ

 

ಹನಿಟ್ರಾಪ್ ಮಾಡ್ತಿದ್ದ ನಟ ಅರೆಸ್ಟ್: 14 ಲಕ್ಷಕ್ಕೂ ಹೆಚ್ಚು ಹಣ ವಂಚನೆ

ಪಾನ್ ಕಾರ್ಡ್ ನವೀಕರಣ, ₹ 1.32 ಲಕ್ಷ ವಂಚನೆ..!

About The Author