ಬೆಂಗಳೂರು: ಅಭಿನವ್ ಮುಕುಂದ್ ಅವರ ಭರ್ಜರಿ ಬ್ಯಾಟಿಂಗ್ ನೆರೆವಿನಿಂದ ಮಂಗಳೂರು ಯುನೈಟೆಡ್ ತಂಡ ಮಹಾರಾಜ ಟಿ20 ಟ್ರೋಫಿಯಲ್ಲಿ ಗುಲ್ಬಾರ್ಗ ಮಿಸ್ಟಿಕ್ಸ್ ವಿರುದ್ಧ 3 ವಿಕೆಟ್‍ಗಳ ರೋಚಕ ಗೆಲುವು ದಾಖಲಿಸಿದೆ.
ಮೈಸೂರಿನ ಶ್ರೀಕಂಠದತ್ತ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮಂಗಳೂರು ಯುನೈಟೆಡ್ ಫಿಲ್ಡಿಂಗ್ ಆಯ್ದುಕೊಂಡಿತು. ಗುಲ್ಬರ್ಗಾ ತಂಡದ ಪರ ದೇವದತ್ ಪಡಿಕಲ್ 16, ರೋಹನ್ ಪಾಟೀಲ್ 10, ಜೆಸ್ವತ್ ಆಚಾರ್ಯ 6 ರನ್ ಗಳಿಸಿದರು.
40 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕೃಷ್ಣನ್ ಶ್ರೀಜಿತ್ ಹಾಗೂ ನಾಯಕ ಮನೀಶ್ ಪಾಂಡೆ 86 ರನ್ ಗಳ ಜೊತೆಯಾಟ ನೀಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.
36 ರನ್ ಗಳಿಸಿ ಮುನ್ನಗುತ್ತಿದ್ದ ಕೃಷ್ಣನ್ ಶ್ರೀಜಿತ್ ವೈಶಾಕ್‍ಗೆ ವಿಕೆಟ್ ಒಪ್ಪಿಸಿದರು. ಮನೀಶ್ ಪಾಂಡೆ 33 ಎಸೆತದಲ್ಲಿ ಅರ್ಧಶತಕ ಸಿಡಿಸಿದರು. ಮನೋಜ್ 29 ರನ್ ಗಳಿಸಿದರು.
ಮನೀಶ್ ಪಾಂಡೆ 45 ಎಸೆತ ಎದುರಿಸಿ 7 ಬೌಂಡರಿ ಹಾಗು 4 ಸಿಕ್ಸರ್ ಸೇರಿ ಒಟ್ಟು ಅಜೇಯ 86 ರನ್ ಗಳಿಸಿದರು.
ಗುಲ್ಬರ್ಗಾ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಮಂಗಳೂರು ಪರ ವೈಶಾಕ್ 28ಕ್ಕೆ 3, ಶರತ್ 44ಕ್ಕೆ 2 ವಿಕೆಟ್ ಪಡೆದರು.
193 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಮಂಗಳೂರು ತಂಡ ಶ್ರೀಷಾ ದಾಳಿಗೆ ತತ್ತರಿಸಿ ಹೋಯ್ತು. ರವಿಕುಮಾರ್ ಸಮರ್ಥ 0, ನೊರೊನ್ಹ 24, ನಿಕಿನ್ ಜೋಸ್ 18, ಅನಿಶ್ವರ್ ಗೌತಮ್ 30, ಸುಜಯ್ 29 ರನ್ ಗಳಿಸಿದರು. 117 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಸೋಟಕ ಬ್ಯಾಟಿಂಗ್ ಮಾಡಿದ ಅಭಿನವ್ ಮನೋಹರ್ 25 ಎಸೆತದಲ್ಲಿ 5 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 55 ರನ್ ಗಳಿಸಿದರು.
ಅಮಿತ್ ವರ್ಮಾ 15, ವೆಂಕಟೇಶ್ 7, ಎಚ್.ಎಸ್.ಶರತ್ ಅಜೇಯ 9 ರನ್ ಗಳಿಸಿದರು.ಇನ್ನು ಎರಡು ಎಸೆತ ಬಾಕಿ ಇರುವಂತೆ ಮಂಗಳೂರು ಯುನೈಟೆಡ್ ಗೆಲುವಿನ ನಗೆ ಬೀರಿತು. ಶ್ರೀಷಾ ಆಚರ್ 26ಕ್ಕೆ 3, ಕಾರ್ತಿಕ್ 33ಕ್ಕೆ 2 ವಿಕೆಟ್ ಪಡೆದರು.