Friday, October 17, 2025

Latest Posts

Graduate : ಕೇರಳದಿಂದ ಮಣಿಪಾಲಕ್ಕೆ ಬಂದ ಪದವೀಧರೆ ಯುವತಿಯ ರಕ್ಷಣೆ

- Advertisement -

Udupi News: ಉಡುಪಿ : ಉನ್ನತ ಪದವೀಧರೆ ಯುವತಿಯೋರ್ವಳು ಮಾನಸಿಕ ಅಸ್ವಸ್ಥೆಗೆ ಗುರಿಯಾಗಿ ಕೇರಳದಿಂದ ಮಣಿಪಾಲಕ್ಕೆ ಬಂದಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರು ಮಣಿಪಾಲ ಪೊಲೀಸರ ಸಹಾಯದಿಂದ ಯುವತಿಯನ್ನು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ಗುರುವಾರ ದಾಖಲಿಸಿದ್ದಾರೆ.

ಯುವತಿ ದಾಖಲಾತಿ ಸಂದರ್ಭದಲ್ಲಿ ತನ್ನ ಹೆಸರು ಆಯೆಷಾ ಬಾನು (30), ತಂದೆ ಅಬ್ದುಲ್ ಕರೀಂ, ಕೇರಳದ ಅಲೆಪ್ಪಿ ನಿವಾಸಿ ಎಂಬ ಮಾಹಿತಿ ನೀಡಿದ್ದಾಳೆ.

ಯಾವುದೋ ಕಾರಣಕ್ಕೆ ಈಕೆ ಮಣಿಪಾಲಕ್ಕೆ ಬಂದಿದ್ದು, ತೀರಾ ಮಾನಸಿಕ ಅಸ್ವಸ್ಥೆಗೆ ಒಳಗಾದಂತೆ ಕಂಡು ಬಂದಿದ್ದಾಳೆ. ಪೊಲೀಸರ ಸಹಾಯದಿಂದ ರಕ್ಷಣಾ ಸಂದರ್ಭದಲ್ಲಿ ಈಕೆ ತೀವ್ರ ಪ್ರತಿರೋಧ ತೋರಿದ ಕಾರಣ ಹರಸಾಹಸ ಪಡಬೇಕಾಯಿತು.

ಮಣಿಪಾಲ ಠಾಣೆಯ ಹೆಡ್ ಕಾನ್ಸ್ಟೇಬಲ್ ಶ್ರೀಮತಿ ಜ್ಯೋತಿನಾಯಕ್ ಹಾಗೂ ಎಎಸ್‌ಐ ಗಂಗಪ್ಪ ಕಾರ್ಯಾಚರಣೆಯಲ್ಲಿ ನೆರವಾದರು. ಯುವತಿಯ ಸಂಬಂಧಿಕರು ಮಣಿಪಾಲ ಠಾಣೆ ಅಥವಾ ಬಾಳಿಗಾ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ತಿಳಿಸಿದ್ದಾರೆ.

KMF-ಹಾಲಿನ ದರ ಪರಿಷ್ಕರಣೆ

Pickup : ಮನೆ ಮೇಲೆ ಪಿಕಪ್ ಬಿದ್ದು ಮಹಿಳೆ ಗಂಭೀರ..!

Bike weeling-ಒಂದೇ ಚಕ್ರದಲ್ಲಿ ಬೈಕ್ ಓಡಿಸಿ ತಗಲಾಕ್ಕೊಂಡೆ..!

- Advertisement -

Latest Posts

Don't Miss