ರಾಷ್ಟೀಯ ಖೋಖೋ ಪಂದ್ಯಾವಳಿಗೆ ಯರಮರಸ್ ನ ಮಂಜುಳಾ ಆಯ್ಕೆ..!

www.karnatakatv.net :ರಾಯಚೂರು:  ರಾಷ್ಟ್ರೀಯ ಜೂನಿಯರ್ ಖೋಖೋ ಪಂದ್ಯಾವಳಿಗೆ ತಾಲೂಕಿನ ಯರಮರಸ್‌ನ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ, ಆದಿ ಬಸವೇಶ್ವರ ಸ್ಪೋರ್ಟ್ಸ ಕ್ಲಬ್ ಆಟಗಾರ್ತಿ ಮಂಜುಳಾ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಕೋಲಾರದಲ್ಲಿ ನಡೆದ ರಾಷ್ಟ್ರೀಯ ಖೋ ಖೋ ತಂಡದ ಆಯ್ಕೆಯಾಗಿದ್ದು, ಸೆ.22 ರಿಂದ 26 ವರೆಗೆ ಓಡಿಸಾ ರಾಜ್ಯದ ಭುವನೇಶ್ವರದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದು, ಜಿಲ್ಲಾ ಖೋ ಖೋ ಅಸೋಸಿಯೇಷನ್ ಅಧ್ಯಕ್ಷ ಸದಸ್ಯರು, ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು, ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು ಸಿಬ್ಬಂದಿಯವರು ಸೇರಿದಂತೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ.

ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು

About The Author