Thursday, May 22, 2025

Latest Posts

ಮನ್‌ಮುಲ್ ಚುನಾವಣೆ ಫಲಿತಾಂಶ ಪ್ರಕಟ: ಮತ್ತೆ ಅಧ್ಯಕ್ಷರಾಗಿ ಆಯ್ಕೆಯಾದ ಹ್ಯಾಟ್ರಿಕ್ ಗೆಲುವಿನ ಸರದಾರ

- Advertisement -

Mandya News: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮಂಡ್ಯ ತಾಲೂಕಿನ ಹಾಲು ಒಕ್ಕೂಟ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿದೆ.

ಅಧ್ಯಕ್ಷರಾಗಿ ಹ್ಯಾಟ್ರಿಕ್ ಗೆಲುವಿನ ಸರದಾರ ಯು.ಸಿ.ಶಿವಪ್ಪ, ಉಪಾಧ್ಯಕ್ಷ ಕೃಷ್ಣೇಗೌಡ ಮಂಗಳವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದರೆ ಉಪಾಧ್ಯಕ್ಷ ಕೃಷ್ಣೇಗೌಡ ಆಯ್ಕೆ ಬಗ್ಗೆ ಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದು, ವಿಚಾರಣೆ ಬಾಕಿ ಇರುವುದರಿಂದ ಅಧಿಕೃತವಾಗಿ ಉಪಾಧ್ಯಕ್ಷರೆಂದು ಘೋಷಣೆಯಾಗಿಲ್ಲ.

ಹೈಕೋರ್ಟ್‌ನಲ್ಲಿ ಜೂನ್ 4ರಂದು ಅಂತಿಮವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನಿರ್ದೇಶಕರಾಾಗಿ ಮುಂದುವರಿಯುತ್ತಾರೆ ಎಂದು ಚುನಾವಣಾಧಿಕಾರಿ ಶಿವಾನಂದಮೂರ್ತಿ ಹೇಳಿದ್ದಾರೆ.

ಮನಮುಲ್ ನಿರ್ದೇಶಕರ ಚುನಾವಣೆಯಲ್ಲಿ  ಮಳವಳ್ಳಿಯಿಂದ ಆಯ್ಕೆಯಾಗಿರುವ ಕೃಷ್ಣೇಗೌಡರ ಆಯ್ಕೆ ಕುರಿತು ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವ ಕಾರಣಕ್ಕೆ ಚುನಾವಣೆ ಪ್ರಕ್ರಿಯೆಯ ಅಧಿಕೃತ ಫಲಿತಾಂಶಕ್ಕೆ ತಡೆಯಾಜ್ಞೆ ನೀಡಲಾಗಿದೆ.

ಸತತ ಮೂರು ಬಾರಿ ಅಧ್ಯಕ್ಷ ಸ್ಥಾನಕ್ಕೇರಿದ್ದ ಶಿವಪ್ಪ ಅವರಿಗೆ ಅಪ್ಪಾಜಿಗೌಡ, ಹರೀಶ್‌ಬಾಬು, ಬಿ.ಬೋರೇಗೌಡ ಇವರೆಲ್ಲ ಪೈಪೋಟಿ ನೀಡಿದ್ದರು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ, ಶಾಸಕ ಗಾಣಿಗ ರವಿಕುಮಾರ್ ಸೇರಿ ಬೇರೆ ಬೇರೆ ಶಾಸಕರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಭೆ ನಡೆಸಿ, ಅಪಸ್ವರಕ್ಕೆ ಅವಕಾಶ ನೀಡದ ಹಿನ್ನೆಲೆ, ಮೊದಲ ಅವಧಿಗೆ ಶಿವಪ್ಪ ಮತ್ತು ಕೃಷ್ಣೇಗೌಡ ಅವರನ್ನು ಅಂತಿಮಗ“ಳಿಸಿದ್ದರು.

ಇನ್ನು ಈ ಬಗ್ಗೆ ಮಾಧ್ಯಮದ ಜತೆ ಮಾತನಾಡಿರುವ ಶಿವಪ್ಪ, ಮನಮೂಲ್‌ನ ಎಲ್ಲ ಅಧಿಕಾರಿಗಳನ್ನು, ನಿರ್ದೇಶಕರನ್ನು ಸೇರಿಸಿಕ“ಂಡು ರೈತ ಸ್ನೇಹಿಯಾಗಿ ಕೆಲಸ ಮಾಡುತ್ತೇನೆ. ಈಗಾಗಲೇ ಕೇವಲ 6 ತಿಂಗಳಲ್ಲಿ ದೆಹಲಿಯಲ್ಲಿ 50 ಸಾವಿರ ಲೀ. ಹಾಲು ಮಾರಾ’’ವಾಗಿ ದಾಖಲೆ ಬರೆದಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹಾಲು ಮತ್ತು ಹಾಲಿನ ಉತ್ಪನ್ನ ಮಾರಾಟ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇನ್ನು ದೆಹಲಿಯಲ್ಲಿ 6 ತಿಂಗಳಲ್ಲಿ 50 ಸಾವಿರ ಲೀ. ಹಾಲು ಮಾರಾಟವಾಗಿರುವ ಕಾರಣಕ್ಕೆ ಮನಮುಲ್ ಮಾಜಿ ಅಧ್ಯಕ್ಷ ಬಿ.ಬೋರೇಗೌಡ ಕೇಕ್ ಕತ್ತರಿಸಿ, ಆಡಳಿತ ಮಂಡಳಿ ಪದಾಧಿಕಾರಿ, ಅಧಿಕಾರಿಗಳಿಗೆ ತಿನ್ನಿಸಿದರು.

- Advertisement -

Latest Posts

Don't Miss