ಕರ್ನಾಟಕ ರಾಜ್ಯ ಸಭೆಗೆ ನಡುಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿಯಾದ ಮನ್ಸೂರ್ ಅಲಿಖಾನ್ 58 ಕೋಟಿ ರು ಆಸ್ತಿ ಘೋಷಣೆ ಮಾಡಿದ್ದಾರೆ.
13ಕೋಟಿ ಚರಾಸ್ತಿ,44,89ಕೋಟಿ ರು ಸ್ತಿರಾಸ್ತಿ ಇದ್ದು,3.95 ಕೋಟಿ ರು ಸಾರ ಹೊಂದಿರುವುದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸುವ ಪ್ರಮಾಣ ಪತ್ರದಲ್ಲಿ ಮನ್ಸೂರ್ ತಿಳಿಸಿದ್ದಾರೆ.
ಚರಾಸ್ತಿ ಪೈಕಿ 8.39ಕೋಟಿ ರು ಮನ್ಸೂರ್ ಅಲಿಖಾನ್ ಹೊಂದಿದ್ದು, ಪತ್ನಿ4.41ಕೋಟಿ ರು ಅವಲಂಬಿತರು,ಇಬ್ಬರು ತಲಾ18 ಲಕ್ಷ ರು ಹೊಂದಿದ್ದಾರೆ ಎಂದು ಮಾಹಿತಿ ಹಿಳಿಸಿದ್ದಾರೆ.
ಇನ್ನೂ ಸ್ಥಿರಾಸ್ತಿಯಲ್ಲಿ 39.94 ಕೋಟಿ ರು,ಮನ್ಸೂರ್ ಅಲಿಖಾನ್,4.95ಕೋಟಿ ರು ಮನ್ಸೂರ್ ಹೆಂಡತಿ ಹೊಂದಿದ್ದಾರೆ. ಇನ್ನು ಚರಾಸ್ತಿ ಪೈಕಿ9 ಲಕ್ಷ ರು,ನಗದು ಹಾಗೂ 1.8 ಕೋಟಿ ರು ಮೌಲ್ಯದ ಮೂರು ಕಾರುಗಳು,1.32ಕೊಟಿ ರು ಚಿನ್ನಾಭರರಣ ಹೊಂದಿದ್ದಾರೆ,ಸ್ಥಿರಾಸ್ತಿಯಲ್ಲಿ ಹತ್ತಾರು ಕಡೆ ನಿವೇಶನ, ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳು ಇದೆ ಎಂದು ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿ ಮನ್ಸೂರ್ ಚುನಾವಣಾಧಿಕಾರಿಗಳಿದೆ ಮಾಹಿತಿ ನೀಡಿದ್ದಾರೆ.