Sunday, June 1, 2025

Latest Posts

ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡವರಿಗೆ ಬಂಪರ್ ಆಫರ್

- Advertisement -

www.karnatakatv.net: ರಾಷ್ಟ್ರೀಯ- ನವದೆಹಲಿ: ಸರ್ಕಾರ ಹಾಗೂ ಸಂಘಗಳು ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಎಷ್ಟೇ ಜಾಗೃತಿ ಮೂಡಿಸಿದ್ರು, ಜನರಲ್ಲಿ ಮಾತ್ರ ಭಯ ಹಾಗೂ ಕೆಟ್ಟ ಭಾವನೆ ಹೋಗುತ್ತಿಲ್ಲ. ಹೀಗಾಗಿ, ಸರ್ಕಾರ, ಕಂಪನಿ, ಸಂಸ್ಥೆಗಳು ಜನರಿಗ ಬಂಪರ್ ಆಫರ್‍ಗಳನ್ನ ನೀಡಿ ಜನರು ಲಸಿಕೆ ಹಾಕಿಸಿಕೊಳ್ಳುವ ಪ್ರಯತ್ನ ಮಾಡ್ತಿದೆ. ಕೊರೊನಾ ನಿರೋಧಕ ಲಸಿಕೆ ಪಡೆದು ಸಂಚರಿಸುವ ಪ್ರಯಾಣಿಕರಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಶೇ.10ರಷ್ಟು ರಿಯಾರಿತಿ ಘೋಷಿಸಿದೆ. ಭಾರತದಲ್ಲಿನ 18ವರ್ಷ ಮೇಲ್ಪಟ್ಟ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಈ ಆಫರ್ ಅನ್ವಯವಾಗಲಿದ್ದು, ಭಾರತದಿಂದ ಬುಕ್ ಮಾಡುವವರು ಕನಿಷ್ಟ ಒಂದು ಡೋಸ್ ಲಸಿಕೆ ಪಡೆದಿರಬೇಕು ಹಾಗೂ ಪ್ರಯಾಣಿಕರು ಏರ್ ಪೋರ್ಟ್ ಚೆಕ್-ಇನ್ ವೇಳೆ ಕೊವಿಡ್ -19 ಪ್ರಮಾಣಪತ್ರವನ್ನ ಸಲ್ಲಿಸಬೇಕು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು, ಮ್ಯಾಕ್ ಡೊನಾಲ್ಡ್ ಕಂಪನಿಯು ಲಸಿಕೆ ಪಡೆದವರಿಗೆ ಶೇ.20ರಷ್ಟು ನೀಡಲು ಮುಂದಾಗಿದೆ. ಅಲ್ಲದೇ, ಲಸಿಕೆ ಹಾಕಿಸಿಕೊಂಡವರಿಗೆ ಸೆಂಟ್ರಲ್ ಬ್ಯಾಂಕ್ ವತಿಯಿಂದ ಉಳಿತಾಯ ಖಾತೆ ಹೊಂದಿದ ಗ್ರಾಹಕರಿಗೆ ನೀಡುವ ಬಡ್ಡಿ ದರ ಹೆಚ್ಚಿಸಲಾಗಿದೆ.

- Advertisement -

Latest Posts

Don't Miss