Jatre ;ಗೌರಿ ಸಮುದ್ರದ ಶ್ರೀ ಮಾರಿಕಾಂಭ ದೇವಿಯ ಜಾತ್ರಾ ಮಹೋತ್ಸವ..!

ಚಿತ್ರದುರ್ಗ: ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಐತಿಹಾಸಿಕ ಜಾತ್ರೆ ಗೌರಿ ಸಮುದ್ರದ ಶ್ರೀ ಮಾರಿಕಾಂಬ ಜಾತ್ರೆ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ವತಿಯಿಂದ ಅದ್ದೂರಿಯಾಗಿ ನಡೆಯಿತು.

ಈ ಜಾತ್ರೆಗೆ ಆಂಧ್ರ ಬಳ್ಳಾರಿ ಜಿಲ್ಲೆಗಳಿಂದ ಸಹಸ್ರಾರು ಭಕ್ತರು ದೇವಿಯ ಕೃಪೆಗೆ ಪಾತ್ರರಾದರು ಈ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿದೆ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತಗಳ ಸಹಯೋಗದೊಂದಿಗೆ ಈ ಜಾತ್ರೆಯು ನಡೆಯಿತು. ವಿಶೇಷವೆಂದರೆ ಎರಡು ಗಡಿ ಜಿಲ್ಲೆಗಳ ದೇವಿಯಾಗಿದ್ದು, ಕರ್ನಾಟಕ ಮತ್ತು ಆಂಧ್ರ ಎರಡು ಭಾಗಗಳ ಭಕ್ತರು ಇಲ್ಲಿಗೆ ಬರುತ್ತಾರೆ ಮಾರಿಕಾಂಬ ದೇವಿಯು ಆಂಧ್ರ ಮೂಲದ ದೇವಿಯಾಗಿದ್ದು ಅಲ್ಲಿನ ಭಕ್ತರು ಮತ್ತು ಕರ್ನಾಟಕದ ಗೌರಿ ಸಮುದ್ರ ಗ್ರಾಮಕ್ಕೆ ಬಂದು ನೆಲೆಯಾಗಿದ್ದಾರೆ ಎಂಬ ನಂಬಿಕೆ ಇದೆ. ಭಕ್ತರ ಹರಕೆಗಳಾದ ಬೇವಿನ ಸೀರೆ ರೈತರು ಬೆಳೆದ ಬೆಳೆಗಳು ಹಾಗೂ ಕೋಳಿ ತೂರುವ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ ಭಕ್ತರ ನಂಬಿಕೆಗಳಂತೆ ದಡರ ಅಮ್ಮ ಇನ್ನಿತರ ಕಾಯಿಲೆಗಳಿಗೆ ಹರಕೆಗಳನ್ನು ಕಟ್ಟಿಕೊಂಡು ದೇವಿ ಕೃಪೆಗೆ ಪಾತ್ರರಾಗುತ್ತಾರೆ

ಶ್ರೀ ಮಾರಿಕಾಂಬ ದೇವಿಯು ಮೂಲ ದೇವಾಲಯದಿಂದ ತುಂಬಲು ದೇವಸ್ಥಾನಕ್ಕೆ ಸುಮಾರು ನಾಲ್ಕು ಕಿಲೋಮೀಟರ್ ದೂರದ ವಿಶಾಲ ಪ್ರದೇಶದವರೆಗೆ ತೆರಳಿ ತುಂಬಲು ದೇವಾಲಯದಲ್ಲಿ ಬುಡಕಟ್ಟುಗಳ ಆಚರಣೆಯಂತೆ ಪೂಜಿಸಲ್ಪಡುತ್ತದೆ ಈ ದೇವಿಯನ್ನು ಮಧ್ಯಾಹ್ನದ ಮಾರಿ ಎಂದು ಕೂಡ ಇದಕ್ಕೆ ಕಾರಣ ಮಧ್ಯಾಹ್ನದಿಂದ ಸಂಜೆಯವರೆಗೆ ಈ ಪ್ರದೇಶದಲ್ಲಿ ದೇವಿ ನೆಲೆಸಿ ಸಂಜೆ ಆಗುವುದರೊಳಗೆ ಮೂಲ ದೇವಾಲಯವನ್ನು ತಲುಪುತ್ತಾಳೆ ಸಂಜೆ ಆದರೆ ಇಲ್ಲಿ ಯಾರೂ ಕೂಡ ಉಳಿಯುವ ಹಾಗಿಲ್ಲ

ಊರಿನ ಗ್ರಾಮಸ್ಥರು ಜಾತ್ರೆ ಸಾಗಿದ ನಂತರ ಒಂದು ವಾರದವರೆಗೂ ಒಲಯ ಮೇಲೆ ಹೆಂಚನ್ನು ಇಡುವುದಿಲ್ಲ ಮತ್ತು ಸರಗ ಚೆಲ್ಲಿದ ನಂತರ ಒಂದು ವಾರದವರೆಗೂ ಸ್ನಾನ ಮಾಡುವ ಹಾಗಿಲ್ಲ ಎಂಬ ಹಲವಾರು ಬುಡಕಟ್ಟು ನಿಯಮಗಳು ಪಾಲನೆ ಮಾಡಿಕೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.

Ganesh :ಮಹಾಶಕ್ತಿ ಗಣಪ: ಹಿಂದೂ ಮುಸ್ಲೀಂ ಭಾವೈಕ್ಯತೆಯ ಸಂಕೇತ;

Ganesh Installation ಈದ್ಗಾ ಗಣೇಶನ ಪ್ರತಿಷ್ಠಾಪನೆ; ಶಾಸಕರ ಸಖತ್ ಡ್ಯಾನ್ಸ್;

Water problem: ನೀರಿಲ್ಲದೆ ಒಣಗಿ ನಾಶವಾಗುತ್ತಿರುವ ಭತ್ತದ ಬೆಳೆ;

About The Author