Saturday, April 19, 2025

Latest Posts

Market : ವರ್ಷವಾದರು ಹಂಚಿಕೆಯಾಗದ ಮಾರುಕಟ್ಟೆ ಮಳಿಗೆ : ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ವ್ಯಾಪಾರಿಗಳು

- Advertisement -

Hubballi News : ಸ್ಮಾರ್ಟ್ ಸಿಟಿ ಯೋಜನೆ ಯಲ್ಲಿ ಮಾರ್ಕೆಟ್ ನಿರ್ಮಾಣವಾಗಿ ಹೆಚ್ಚು ಕಡಿಮೆ ಎರಡು ವರ್ಷ ಆಗಿದೆ. ಆದರೆ ಸ್ಮಾರ್ಟ್ ಸಿಟಿ, ಪಾಲಿಕೆ ಹಗ್ಗ ಜಗ್ಗಾಟದ ನಡುವೆ ಮಾರುಕಟ್ಟೆಯ ಮಳಿಗೆ ಹಂಚಿಕೆಯಾಗಿಲ್ಲ. ಹೀಗಾಗಿ ಬೀದಿಯೇ ವ್ಯಾಪಾರಿಗಳಿಗೆ ಆಸರೆಯಾಗಿದೆ. ಹಲವಾರು ಬಾರಿ ಮಳಿಗೆ ಕೊಡಿ ಎಂದು ಮನವಿ ಮಾಡಿದರು, ಅಧಿಕಾರಿಗಳು ಮಳಿಗೆ ಕೊಟ್ಟಿಲ್ಲ. ಕೊನೆಗೆ ಪಾಲಿಕೆ ಅಧಿಕಾರಿಗಳು ಮಾರುಕಟ್ಟೆ ವಿಸಿಟ್ ಗೆ ಬಂದಾಗ ವ್ಯಾಪಾರಿಗಳು ಕೈ ಮುಗಿದು ನಮಗೆ ಮಳಿಗೆ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ.

ಹೌದು ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಇರೋ ಜನತಾ ಮಾರುಕಟ್ಟೆ ನಿರ್ಮಾಣವಾಗಿ ಹೆಚ್ಚು ಕಡಿಮೆ ಎರಡು ವರ್ಷ ಆಯ್ತು. ಆದರೆ ಇನ್ನು‌ ಮಳಿಗೆ ಹಂಚಿಕೆಯಾಗಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಕೆಲಸ ಮುಗಿದರೂ ಅದು ಪಾಲಿಕೆಗೆ ಹಸ್ತಾಂತರವಾಗಿಲ್ಲ. ಅದಕ್ಕೆ ಪ್ರಮುಖ ಕಾರಣ ಗುಣಮಟ್ಟ ಸರಿ ಇಲ್ಲ ಅನ್ನೋ ಕಾರಣಕ್ಕೆ ಹುಧಾ ಪಾಲಿಕೆ ಕಾಮಗಾರಿಯನ್ನ ತನ್ನ ವ್ಯಾಪ್ತಿಗೆ ತಗೆದುಕೊಂಡಿಲ್ಲ. ಹೀಗಾಗಿ ಮಾರುಕಟ್ಟೆ ನಿರ್ಮಾಣವಾಗಿ ಎರಡು ವರ್ಷ ಆದರೂ ಮಳಿಗೆಗಳು ಖಾಲಿ ಬಿದ್ದಿವೆ.

ಖಾಲಿ ಬಿದ್ದ ಮಳಿಗೆಗಳನ್ನ ವೀಕ್ಷಣೆ ಮಾಡಲು ಪಾಲಿಕೆ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಮೇಯರ್ ವೀಣಾ ಭಾರದ್ವಾಡ್ ಸ್ಥಳಕ್ಕೆ ಆಗಮಿಸಿದ್ರು‌. ಈ ವೇಳೆ ವ್ತಾಪಾರಿಗಳು ನಮಗೆ ಮಳಿಗೆ ಕೊಡಿ ಎಂದು ಕೈ ಮುಗಿದು ಭಾವುಕರಾಗಿದ್ದಾರೆ. ನಾವು ಬೀದಿಯಲ್ಲಿ ಸಾಯುತ್ತಿದ್ದೇವೆ ಎಂದು ವ್ಯಾಪಾರಿಗಳು ಆಕ್ರೋಶ ಹೊರಹಾಕಿದರು. ಕಳೆದ ಎರಡು ವರ್ಷಗಳಿಂದ ಸ್ಮಾರ್ಟ್ ಸಿಟಿ, ಪಾಲಿಕೆ ನಡುವಿನ ಹಗ್ಗ ಜಗ್ಗಾಟಕ್ಕೆ ಅಮಾಯಕ ವ್ಯಾಪರಿಗಳ ಬದುಕು ಬೀದಿಯಲ್ಲಿದೆ.ಹೀಗಾಗಿ ವ್ಯಾಪಾರಿಗಳು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡರು.

ಹುಬ್ಬಳ್ಳಿ ಜನತಾ ಮಾರ್ಕೆಟ್ ನಿರ್ಮಾಣವಾಗಿ ಹೆಚ್ಚು ಕಡಿಮೆ ಎರಡು ವರ್ಷ ಆಯ್ತು. ಹುಧಾ ಅವಳಿ ನಗರದಲ್ಲಿ ಹೆಚ್ಚು ಕಡಿಮೆ 63 ಕಾಮಗಾರಿಗಳು ಪಾಲಿಕೆಗೆ ಹಸ್ತಾಂತರವಾಗಿವೆ. ಆದರೆ ಜನತಾ ಮಾರ್ಕೆಟ್ ಇದುವರೆಗೂ ಹಸ್ತಾಂತರ ಆಗಿಲ್ಲ. ಪರಿಣಾಮ ನೂರಾರು ವ್ಯಾಪಾರಿಗಳು ಇಂದಿಗೂ ಬೀದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ.

ನೂರಾರು ಕೋಟಿ ವೆಚ್ಚದಲ್ಲಿ ಜನತಾ ಮಾರ್ಕೆಟ್ ನಿರ್ಮಾಣವಾಗಿದ್ದರು, ಮಾರಾಟಕ್ಕೆ ಮುಕ್ತವಾಗದೆ ಹಾಳಾಗ್ತಿವೆ. ಇದೇ ಕಾರಣಕ್ಕೆ ಪಾಲಿಕೆ ಸರ್ಕಾರದ ಗಮನಕ್ಕೂ ವಿಷಯ ತಂದಿದೆ. ಇದೇ ಕಾರಣಕ್ಕೆ ಪಾಲಿಕೆ ಅಧಿಕಾರಿಗಳು ಜನತಾ ಮಾರುಕಟ್ಟೆಗೆ ಭೆಟಿ ನೀಡಿ ಪರಿಶೀಲನೆ ಮಾಡಿ, ಮುಂಬರುವ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿ ಮಾರುಕಟ್ಟೆ ಮುಕ್ತ ಮಾಡುವುದಕ್ಕೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಕೋಟಿ ಕೋಟಿ ರೂ. ವೆಚ್ಚದಲ್ಲಿ ಕಟ್ಟಿದ ಜನತಾ ಮಾರ್ಕೆಟ್ ಹಳ್ಳ ಹಿಡದಿದೆ. ಮಾರುಕಟ್ಟೆಯ ಮಳಿಗೆ ನಂಬಿದ್ದ ನೂರಾರು ವ್ಯಾಪಾರಿಗಳು ಇಂದಿಗೂ ಬೀದಿಯಲ್ಲಿದ್ದಾರೆ. ಇದೀಗ ಅಧಿಕಾರಿಗಳು ಭೇಟಿ ನೀಡಿದ್ದು,ಇನ್ನಾದರೂ ಮಾರುಕಟ್ಟೆಯ ಮಳಿಗೆ ವ್ಯಾಪಾರಿಗಳಿಗೆ ಮುಕ್ತವಾಗತ್ತಾ ಇಲ್ಲವಾ ಅನ್ನೋದನ್ನ ಕಾದುನೋಡಬೇಕಿದೆ.

Police : ಹುತಾತ್ಮ ಪೊಲೀಸರಿಗೆ ಇನ್ನೂ ನಿರ್ಮಾಣವಾಗಿಲ್ಲ ಶಾಶ್ವತ ಸ್ಮಾರಕ : ಇಂದು ಪೊಲೀಸ್ ಸಂಸ್ಮರಣಾ ದಿನ

ಮಹಾರಾಷ್ಟ್ರದ ಗಡಿ ಕನ್ನಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ; ಮಹಾ ಸರ್ಕಾರ ಕುತಂತ್ರ ಆರೋಪ.

ಬಿಆರ್ ಟಿಎಸ್ ನೌಕರರಿಗೆ ಒಂದು ದಿನದ ತರಬೇತಿ

- Advertisement -

Latest Posts

Don't Miss