75 ವರ್ಷದ ವೃದ್ಧನೊಬ್ಬ ತನಗಿಂತ 35 ವರ್ಷದ ಮಹಿಳೆಯನ್ನು ಮದುವೆಯಾಗಿ ಹನಿಮೂನ್ಗೂ ಮೊದಲೇ ಜೀವ ಬಿಟ್ಟ ಘಟನೆ ನಡೆದಿದೆ. 75 ವರ್ಷದ ವೃದ್ಧ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ. ಇದರ ಬೆನ್ನಲ್ಲೇ ಮನೆಯವರ ವಿರೋಧದ ನಡುವೆಯೂ ಜಲಾಲ್ ಪುರದ ಮಾಂಭಾವತಿಯನ್ನ ಮದುವೆಯಾಗಿದ್ದ. ಮರುದಿನವೇ ಅಕಾಲಿಕವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರ್ ಜಿಲ್ಲೆಯ ಕುಚ್ಮುಚ್ ಗ್ರಾಮದಲ್ಲಿ ನಡೆದಿದೆ. ಈ ಅಸಾಮಾನ್ಯ ಘಟನೆ ಸ್ಥಳೀಯರಲ್ಲಿ ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ.
ಹೌದು ಮೃತ ವ್ಯಕ್ತಿ 75 ವರ್ಷದ ಸಂಗ್ರೂರಮ್ ಕಳೆದ ವರ್ಷ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನದಲ್ಲಿದ್ದರು. ಈ ಹಿನ್ನೆಲೆ ಅವರು 35 ವರ್ಷದ ಮಾಂಭಾವತಿ ಎಂಬ ಮಹಿಳೆಯನ್ನು ಮದುವೆಯಾಗಲು ನಿರ್ಧರಿಸಿದರು. ಮನೆಯವರ ವಿರೋಧದ ನಡುವೆಯೂ ಅವರು ಸೆಪ್ಟೆಂಬರ್ 29 ರಂದು ಮೊದಲು ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದರು. ನಂತರ ಸ್ಥಳೀಯ ದೇವಾಲಯದಲ್ಲಿ ಸಂಪ್ರದಾಯದಂತೆ ಮದುವೆ ನೆರವೇರಿಸಿದ್ದರು.
ವಿವಾಹದ ಮೊದಲ ರಾತ್ರಿಯಲ್ಲೇ ವೃದ್ಧನ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೈದ್ಯರು ಆತನ ಸಾವನ್ನು ದೃಢಪಡಿಸಿದ್ದಾರೆ. ಸದ್ಯ ಈ ವೃದ್ಧನ ಸಾವು ಕೆಲವರಲ್ಲಿ ಅನುಮಾನ ಹುಟ್ಟಿಸಿದೆ. ಪೊಲೀಸರು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮದುವೆಯ ಸಂದರ್ಭದಲ್ಲಿ ಮಾಂಭಾವತಿ ನಾನು ಈ ಮನೆಯ ಜವಾಬ್ದಾರಿ ಹಾಗೂ ಮಕ್ಕಳ ಬೆಳೆಸುವ ಹೊಣೆ ತೆಗೆದುಕೊಳ್ಳುತ್ತೇನೆ ಎಂದು ಆತ್ಮೀಯವಾಗಿ ಹೇಳಿದ್ದಾಳೆಂದು ಕುಟುಂಬದವರು ತಿಳಿಸಿದ್ದಾರೆ. ಆದರೆ ಮದುವೆಯ ಎರಡನೇ ದಿನವೇ ವೃದ್ಧನ ಸಾವಿನಿಂದ ಆಘಾತ ಉಂಟಾಗಿದೆ. ದೆಹಲಿಯಲ್ಲಿ ವಾಸಿಸುವ ಸೋದರಳಿಯರು ಸೇರಿದಂತೆ ಮೃತರ ಸಂಬಂಧಿಕರು ಅಂತ್ಯಕ್ರಿಯೆಯ ವಿಧಿಗಳನ್ನು ಸ್ಥಗಿತಗೊಳಿಸಿದ್ದಾರೆ
ಸಂಗ್ರೂರಮ್ ಅವರ ಸಾವಿಗೆ ಕೆಲವರು ಸಹಜ ಸಾವು ಎಂದು ವ್ಯಾಖ್ಯಾನಿಸಿದರೆ, ಇನ್ನೂ ಕೆಲವರು ಇದು ತೀವ್ರ ಪರಿಶೀಲನೆಯ ಅಗತ್ಯವಿರುವ ಘಟನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಧುನಿಕ ವೈದ್ಯಕೀಯ ಪರೀಕ್ಷೆ ಮತ್ತು ಪೋಸ್ಟ್‌ಮಾರ್ಟಂ ವರದಿ ನಿರೀಕ್ಷೆಯಲ್ಲಿದೆ.
ವರದಿ : ಲಾವಣ್ಯ ಅನಿಗೋಳ