ತಾಯಿ ಬೈದಿದ್ದಕ್ಕೆ ಮನನೊಂದು ಇಬ್ಬರು ಅಪ್ರಾಪ್ತ ಸಹೋದರಿಯರು ಭಾವುಕ ಪತ್ರ ಬರೆದಿಟ್ಟು ಮನೆಯಿಂದ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ನಡೆದಿದೆ ನಿಮ್ಮ ಕಣ್ಣು ಮುಂದೆ ಸಾಯೋದಕ್ಕೆ ಆಗಲ್ಲ… ದೂರ ಹೋಗಿ ಸತ್ತಿದ್ದೇವೆ ಎಂದು ಪತ್ರ ಬರೆದಿಟ್ಟು ಮನೆ ಬಿಟ್ಟಿರುವುದು ಪೋಷಕರು ಮತ್ತು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ.
ಜಿಲ್ಲೆಯ ಶ್ರೀರಂಗಪಟ್ಟಣ...
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ ನಸ್ತಾರ್ ಕಡಲತೀರದಲ್ಲಿ ಭಾನುವಾರ ಸಂಜೆ ದುರ್ಘಟನೆ ಸಂಭವಿಸಿದ್ದು, ಸಮುದ್ರಕ್ಕೆ ಇಳಿದಿದ್ದ ಇಬ್ಬರು ಯುವಕರು ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಪ್ರದೇಶ ಮೂಲದ ಮಹಮ್ಮದ್ ಅಪ್ರೋಜ್ (34) ಹಾಗೂ ರಿಜ್ವಾನ್ ಸಾಕಿರ್ (27) ಎಂದು ಗುರುತಿಸಲಾಗಿದೆ. ಇವರು ಭಟ್ಕಳದ ಖಾಸಗಿ ಗಾರ್ಮೆಂಟ್ ಘಟಕದಲ್ಲಿ ಕೆಲಸ...
ಹಾಸನ ಜಿಲ್ಲೆಯ ಚಿಕ್ಕಬಸವನಹಳ್ಳಿ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ವೃದ್ಧನ ಮೇಲೆ ಮಚ್ಚಿನಿಂದ ಭೀಕರ ದಾಳಿ ನಡೆಸಿದ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗಾಯಗೊಂಡಿರುವವರು 68 ವರ್ಷದ ವೃದ್ದನನ್ನು ತಮ್ಮೇಗೌಡ ಎಂದು ಗುರುತಿಸಲಾಗಿದೆ. ಬೋರೇಗೌಡ ಅಲಿಯಾಸ್ ಲೋಕೇಶ್ (49) ಎಂಬಾತ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಸ್ಥಳೀಯರ ಪ್ರಕಾರ, ಆತ ಪುಡಿ ರೌಡಿ ಎಂದು...
ಆಡುಗೋಡಿ ಯುವತಿ ಸಾವು ಪ್ರಕರಣ: ಗೋಡೆಗಳ ಮೇಲಿನ ಚೀಟಿಗಳು, ನಿಗೂಢ ಯುವಕ.
ಬೆಂಗಳೂರು ನಗರದ ಆಡುಗೋಡಿಯಲ್ಲಿ ನಡೆದ ಯುವತಿ ಸಾವಿನ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಪೂಜಾ ದತ್ತಾ ಎಂಬ ಯುವತಿಯ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮನೆಯನ್ನು ಪರಿಶೀಲಿಸಿದಾಗ, ಮನೆಯ ಗೋಡೆಗಳ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದ...
ಬೆಂಗಳೂರಿನ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರದ ಬಳಿ ಇರುವ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್ ಕಂಪನಿಯ ಶೌಚಾಲಯದಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದಿ. ಶೌಚಾಲಯಕ್ಕೆ ತೆರಳಿದ್ದ ಮಹಿಳೆಯೊಬ್ಬರಿಗೆ ಆಕಸ್ಮಿಕವಾಗಿ ಹೆರಿಗೆ ಆಗಿದೆ ಎಂದು ಶಂಕಿಸಲಾಗಿದೆ. ಕಂಪನಿಯ ಬಾತ್‌ರೂಮ್‌ನ ಕಸದ ಬುಟ್ಟಿಯಲ್ಲಿ ಶಿಶುವಿನ ಶವ ಕಂಡು ಬಂದಿದ್ದು, ಇದರಿಂದ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ಹೆರಿಗೆಯ ನಂತರ, ಗಾಬರಿಗೊಂಡ...
ಧಾರವಾಡ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆ ಸಂಭವಿಸಿದ್ದು, ಮಾಜಿ ಶಾಸಕನ ಪುತ್ರನ ಶವ ಕಾರಿನಲ್ಲೇ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಎಂದು ಗುರುತಿಸಲಾಗಿದೆ.
ಧಾರವಾಡ ತಾಲೂಕಿನ ರಾಮಾಪುರ ಗ್ರಾಮದ ರೈಲ್ವೆ ಟ್ರ್ಯಾಕ್ ಪಕ್ಕದ ದಟ್ಟ ಅರಣ್ಯ ಪ್ರದೇಶದಲ್ಲಿ...
ಪ್ರವಾಸಕ್ಕೆ ತೆರಳಲು ಗಂಡ ಅನುಮತಿ ನೀಡಲಿಲ್ಲವೆಂಬ ಕಾರಣಕ್ಕೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೃತೆಯ ಸಂಬಂಧಿಕರು ಇದು ಆತ್ಮಹತ್ಯೆಯಲ್ಲ, ಕೊಲೆ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ನಗರದ ಸರಸ್ವತಿಪುರಂ ನಿವಾಸಿ, 46 ವರ್ಷದ ಸಂಧ್ಯಾ ಮೃತರು. ಮನೆಯಲ್ಲಿ ಇರುವ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂಧ್ಯಾ ಪತ್ತೆಯಾಗಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿದ್ದ...
ಮಂಡ್ಯ ಜಿಲ್ಲೆಯಲ್ಲಿ ನಡೆದ ತಾಯಿ–ಮಗಳು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತರು ತಾಯಿ ಶಂಕುತಲಾದೇವಿ (46) ಮತ್ತು ಮಗಳು ಪ್ರಿಯಾಂಕಾ (19) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಪ್ರಿಯಾಂಕಾಗೆ ಗ್ರಾಮದ ಮುತ್ತುರಾಜ್ (34) ಎಂಬ ವಿವಾಹಿತನೊಂದಿಗೆ ಪ್ರೇಮ ಸಂಬಂಧ ಇದ್ದುದು ಬೆಳಕಿಗೆ...
ಬೆಂಗಳೂರಿನಲ್ಲಿ RBI ಅಧಿಕಾರಿಗಳ ಸೋಗಿನಲ್ಲಿ 7 ಕೋಟಿ 11 ಲಕ್ಷ ರೂಪಾಯಿ ದರೋಡೆ ನಡೆದಿದೆ. ಈ ಪ್ರಕರಣಕ್ಕೆ ಈಗ ವೆಬ್ ಸೀರೀಸ್‌ಗಳು ಸ್ಫೂರ್ತಿಯಾಗಿರಬಹುದೇ ಎಂಬ ಅನುಮಾನ ತನಿಖಾ ತಂಡಕ್ಕೆ ವ್ಯಕ್ತವಾಗಿದೆ. ಮೂರು ಪೊಲೀಸ್ ಠಾಣೆಗಳ ಗಡಿ ಭಾಗದಲ್ಲಿ ಆರೋಪಿಗಳು ದೋಚಿದ ವಾಹನವನ್ನು ಬಿಟ್ಟು ಹೋಗಿರುವುದು ಪ್ಲ್ಯಾನ್ ಬೇಸ್‌ನ ಆಪರೇಷನ್ ಆಗಿರಬಹುದೆಂಬ ಶಂಕೆಯನ್ನು ಗಾಢಗೊಳಿಸಿದೆ.
ATM ಗಳಿಗೆ...
75 ವರ್ಷದ ವೃದ್ಧನೊಬ್ಬ ತನಗಿಂತ 35 ವರ್ಷದ ಮಹಿಳೆಯನ್ನು ಮದುವೆಯಾಗಿ ಹನಿಮೂನ್ಗೂ ಮೊದಲೇ ಜೀವ ಬಿಟ್ಟ ಘಟನೆ ನಡೆದಿದೆ. 75 ವರ್ಷದ ವೃದ್ಧ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ. ಇದರ ಬೆನ್ನಲ್ಲೇ ಮನೆಯವರ ವಿರೋಧದ ನಡುವೆಯೂ ಜಲಾಲ್ ಪುರದ ಮಾಂಭಾವತಿಯನ್ನ ಮದುವೆಯಾಗಿದ್ದ. ಮರುದಿನವೇ ಅಕಾಲಿಕವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಜೌನ್ಪುರ್...