ತುಮಕೂರು: ಕಳೆದ ಅಕ್ಟೋಬರ್ 19, 2021ರಂದು 25 ವರ್ಷದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಂತ 45 ವರ್ಷದ ಶಂಕ್ರಣ, ಸಖತ್ ಸುದ್ದಿಯಾಗಿದ್ದರು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಇವರ ಮದುವೆಯ ಬಗ್ಗೆ ಪ್ರಶಂಸೆ ಕೂಡ ವ್ಯಕ್ತವಾಗಿದ್ದು. ಚೆನ್ನಾಗಿ ಸುಖ ಸಂತೋಷದಿಂದ ಬಾಳಿ ಎಂಬುದಾಗಿ ಹಾರೈಸಿದ್ದರು. ಆದ್ರೇ.. ಇದೀಗ ಹೀಗೆ ವಿವಾಹವಾಗಿದ್ದಂತ ಶಂಕ್ರಣ್ಣ, ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮೂಲಕ 45ರ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಂತ 25ರ ಯುವತಿಯ ಬದುಕು ದುರಂತ ಕಂಡಿದೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದ ಶಂಕರಣ್ಣ ಎಂಬುವರನ್ನು 25 ವರ್ಷದ ಯುವತಿ ವಿವಾಹವಾಗಿದ್ದಳು. ಈ ಮೂಲಕ ಈ ಇಬ್ಬರ ಮದುವೆಯ ಪೋಟೋ, ಸುದ್ದಿ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ಸದ್ದು ಮಾಡಿತ್ತು. ಆದ್ರೇ.. ಶಂಕರಣ್ಣ ಅವರು ತಮ್ಮ ಅಕ್ಕಿಮರಿ ಪಾಳ್ಯದಲ್ಲಿನ ಹೊಲ ಒಂದರಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ಹುಲಿಯೂರು ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂದಹಾಗೇ, ಸಂತೆಮಾವತ್ತೂರು ಗ್ರಾಮದ 25 ವರ್ಷದ ಮೇಘನಾ, 45 ವರ್ಷದ ಶಂಕರಣ್ಣ ಬಳಿಗೆ ಬಂದು, ತಮ್ಮನ್ನು ಮದುವೆಯಾಗುವುದಾಗಿ ಕೋರಿಕೊಂಡಿದ್ದಳು. ಇದಕ್ಕೆ ಒಪ್ಪಿದ್ದಂತ ಶಂಕರಣ್ಣ, ಅಕ್ಟೋಬರ್ 19, 2021ರಲ್ಲಿ ದೇವಸ್ಥಾನದ ಮುಂದೆ ಸರಳವಾಗಿ ವಿವಾಹ ಆಗಿದ್ದರು. ಹೀಗೆ 25ರ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಂತ 45 ವರ್ಷದ ಶಂಕರಣ್ಣ, ಆತ್ಮಹತ್ಯೆಗೆ ಶರಣಾಗಿದ್ದಾರೆ.




