ವಿವಾಹಿತ ಹೆಣ್ಣು ಮಕ್ಕಳು ಇವುಗಳನ್ನ ಧರಿಸಲೇಬಾರದು..

ವಿವಾಹವಾಗುವ ಮುನ್ನ ಮಹಿಳೆಯರ ಜೀವನ ಬೇರೆಯದ್ದಾಗಿರುತ್ತದೆ. ವಿವಾಹವಾದ ಬಳಿಕ ಜವಾಬ್ದಾರಿಗಳು ಹೆಚ್ಚಾಗುತ್ತದೆ. ಕೆಲ ಪದ್ಧತಿಗಳನ್ನ, ನಿಯಮಗಳನ್ನ ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ. ಅಂಥ ಪದ್ಧತಿಗಳಲ್ಲಿ ವಿವಾಹಿತೆಯರು ಕೆಲ ವಸ್ತುಗಳನ್ನ ಧರಿಸಬಾರದು. ಧರಿಸಿದರೆ, ಅದರಿಂದ ಪತಿಗೆ,ಪತಿಯಜೀವಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಹಾಗಾದ್ರೆ ಯಾವ ವಸ್ತುವನ್ನ ವಿವಾಹಿತೆಯರು ಧರಿಸಬಾರದು ಅಂತಾ ತಿಳಿಯೋಣ ಬನ್ನಿ..

ಮದುವೆಗೂ ಮುನ್ನ ಹೆಣ್ಣುಮಕ್ಕಳು ತಮಗೆ ಬೇಕಾದ ರೀತಿ ಇರುತ್ತಾರೆ. ಬೇಕಾದ ಹಾಗೆ ಬಟ್ಟೆ ಧರಿಸುತ್ತಾರೆ. ಬೇಕಾದ್ದನ್ನ ಕೊಂಡು ತಿನ್ನುತ್ತಾರೆ. ಬೇಕಾದ್ದಲ್ಲಿ, ಗೆಳೆಯ ಗೆಳತಿಯರ ಜೊತೆ ಸುತ್ತಾಡುತ್ತಾರೆ. ಆದ್ರೆ ಮದುವೆ ಬಳಿಕ ಎಲ್ಲವೂ ಬದಲಾಗುತ್ತದೆ. ಅಂಥ ಬದಲಾವಣೆಗಳಲ್ಲಿ ಉಡುಗೆ ತೊಡಗೆಯ ಬದಲಾವಣೆ ಕೂಡ ಒಂದು. ಮೊದಲಿನಂತೆ ಮನಸ್ಸಿಗೆ ಬಂದ ಬಟ್ಟೆ, ಆಭರಣವೆಲ್ಲ ಧರಿಸುವಂತಿಲ್ಲ. ಹಾಗೇನಾದರೂ ಅಂಥ ಬಟ್ಟೆ, ಆಭರಣ ಧರಿಸಿದರೆ, ಪತಿ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆ ಇರುತ್ತದೆ.

ಹಾಗಾದ್ರೆ ಯಾವ ವಸ್ತುವನ್ನು ಧರಿಸಬಾರದು ಅನ್ನೋ ಪ್ರಶ್ನೆಗೆ ಉತ್ತರ, ಪೂರ್ತಿ ಬಿಳಿಯಾದ ಬಟ್ಟೆ. ಸೀರೆ ಅಥವಾ ಡ್ರೆಸ್ ಮೇಲೆ ಒಂದೂ ಚೂರು ಬೇರೆ ಬಣ್ಣವಿರದ, ಪೂರ್ತಿ ಬಿಳಿ ಬಣ್ಣದ ಬಟ್ಟೆಯನ್ನ ಮದುವೆಯಾದ ಹೆಣ್ಣುಮಕ್ಕಳು ಧರಿಸಬಾರದು. ಪೂರ್ತಿ ಬಿಳಿ ಬಣ್ಣದ ಬಟ್ಟೆ ಧರಿಸುವುದರಿಂದ ಅದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಎರಡನೇಯದಾಗಿ, ಚಿನ್ನದ ಗೆಜ್ಜೆ. ಇತ್ತೀಚಿನ ದಿನಗಳಲ್ಲಿ ಗೆಜ್ಜೆ ಧರಿಸುವವರ ಸಂಖ್ಯೆ ಕಡಿಮೆಯಾಗಿದೆ. ಧರಿಸಿದರೂ ರೋಲ್ಡ್ ಗೋಲ್ಡ್, ಸ್ಟೈಲಿಶ್ ಗೆಜ್ಜೆ ಧರಿಸುವವರೇ ಹೆಚ್ಚು. ಇನ್ನು ಕೆಲ ಶ್ರೀಮಂತರು ಶೋಕಿಗಾಗಿ ಚಿನ್ನದ ಗೆಜ್ಜೆ ಮಾಡಿಸಿಕೊಂಡು ಹಾಕಿಕೊಳ್ತಾರೆ. ಆದ್ರೆ ಚಿನ್ನದ ಗೆಜ್ಜೆ ಹಾಕಿಕೊಳ್ಳುವುದು, ಆರೋಗ್ಯಕ್ಕೂ ಹಾನಿಕಾರಣ ಮತ್ತು ಮನೆಗೂ ಒಳ್ಳೆಯದಲ್ಲ. ಚಿನ್ನ ಲಕ್ಷ್ಮೀಯ ಸ್ವರೂಪ ಅದನ್ನ ಕಾಲಿಗೆ ಧರಿಸಿದರೆ, ಕೇಡುಂಟಾಗುತ್ತದೆ.

ಮೂರನೇಯದಾಗಿ, ಪೂರ್ತಿ ಕಪ್ಪು ಬಟ್ಟೆ. ಒಂದು ಚೂರು ಬೇರೆ ಬಣ್ಣವಿಲ್ಲದ, ಪೂರ್ತಿ ಕಪ್ಪಾದ ಸೀರೆಯನ್ನ ವಿವಾಹಿತೆಯರು ಧರಿಸಬಾರದು. ಇದು ಪತಿಯ ಆರೋಗ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಇಷ್ಟೇ ಅಲ್ಲದೇ, ಮಂಗಲಸೂತ್ರ, ಕಾಲುಂಗುರ, ಸಿಂಧೂರ, ಇವನ್ನೆಲ್ಲ ಧರಿಸಿದಷ್ಟು ಪತಿ ಅಭಿವೃದ್ಧಿ ಹೆಚ್ಚಾಗುತ್ತದೆ.

About The Author