Monday, December 23, 2024

Latest Posts

ಅತ್ಯಾಚಾರಿಗಳಿಗೆ ರಸ್ತೆಯಲ್ಲಿ ನಿಲ್ಸಿ ಸುಡಬೇಕು: ಧ್ರುವ

- Advertisement -

ಕೋಲ್ಕತ್ತಾ ಟ್ರೈನಿ ವೈದ್ಯೆಯ ಅತ್ಯಾಚಾರ ಪ್ರಕರಣದ ಕುರಿತು ಸ್ಯಾಂಡಲ್‌ವುಡ್​ನ ಆಕ್ಷನ್​ ಪ್ರಿನ್ಸ್​ ನಟ ಧ್ರುವ ಸರ್ಜಾ ಧ್ವನಿಯೆತ್ತಿದ್ದಾರೆ. ಅತ್ಯಾಚಾರ ಎಸಗಿರೋರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಸುಟ್ಟರೂ ಸಮಾಧಾನ ಆಗಲ್ಲ ಅಂತ ಅತ್ಯಾಚಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಕ್ರೂರಿಗೆ ಶಿಕ್ಷೆ ಆಗಲೇಬೇಕು ಎಂದು ವಿಡಿಯೋ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಆಸ್ಪತ್ರೆಯ ಸೆಮಿನಾರ್ ಹಾಲ್​ನಲ್ಲಿ ಆರೋಪಿ ಸಂಜಯ್​ ರಾಯ್ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿದ್ದ.​ ಆಕೆಯ ಕಣ್ಣು ಬಾಯಿಯಲ್ಲಿ ರಕ್ತಸ್ರಾವವಾಗಿದೆ. ಇನ್ನು ಆಕೆಯ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಹೇಳಿದೆ.

ಇನ್ನು ಇದೇ ವಿಚಾರ ಎಲ್ಲೆಡೆ ಸುದ್ದಿಯಾಗ್ತಿದ್ದು, ದೇಶಾದ್ಯಂತ ಪ್ರತಿಭಟನೆಗಳು ನಡೀತಿವೆ. ಈ ವಿಚಾರವಾಗಿ ನಟ ಧ್ರುವ ಸರ್ಜಾ, ಮೌನ ಮುರಿದಿದ್ದಾರೆ. ಸದ್ಯ ಪ್ಯಾನ್​ ಇಂಡಿಯಾ ಮೂವೀ ಮಾರ್ಟಿನ್​ ಸಿನಿಮಾದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿರುವ ಘಟನೆಯ ಕುರಿತು ಎಕ್ಸ್​ನಲ್ಲಿ ಬೇಸರ ಹೊರಹಾಕಿದ್ದಾರೆ. ಈ ವಿಡಿಯೋ ಮಾಡುತ್ತಿರುವ ಉದ್ದೇಶ, 2024, ಆಗಸ್ಟ್ 14ನೇ ತಾರೀಕು, ಇಂಡಿಯನ್ ಸ್ಟ್ಯಾಟಿಸ್ಟಿಕ್ ಪ್ರಕಾರ ಪ್ರತಿ 16 ನಿಮಿಷಕ್ಕೊಂದು ಹೆಣ್ಣು ಮಗು ಅತ್ಯಾಚಾರ ಆಗುತ್ತಿದೆ. ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ ಅಂತಾರೆ. ಎಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ, ಗೌರವ ಇರುವುದಿಲ್ಲವೋ ಅಲ್ಲಿ ಆ ಭಗವಂತನೇ ಇರಲ್ವಂತೆ. ನಮ್ಮದು ರಾಮ ಜನ್ಮಭೂಮಿ ಅಂತ ಕರೆಯುತ್ತೇವೆ. ಕೆಲವು ಬಾಸ್ಟರ್ಡ್ಸ್ ಮಾಡುತ್ತಿರುವ ಕೃತ್ಯದಿಂದ ನಿಜವಾಗಲೂ ನಮ್ಮ ಭಾರತಕ್ಕೆನೇ ಕೆಟ್ಟ ಹೆಸರು’. ಹೆಣ್ಣು ಮಕ್ಕಳಿಗೆ ಮಾತ್ರ ಹೀಗಿರಿ ಆಗಿರಿ, ಇದನ್ನೇ ಮಾಡಬೇಕು, ಇದೇ ರೀತಿ ಬಟ್ಟೆ ಹಾಕಬೇಕು ಅಂತ ಹೇಳೋದಕ್ಕಿಂತ, ಒಬ್ಬ ಹುಡುಗನ್ನ ರೈಸ್​ ಮಾಡಬೇಕು.. ಪ್ರತಿಯೊಬ್ಬ ಮನೆಯಲ್ಲು ಗಂಡು ಮಕ್ಕಳಿಗೆ ಕಂಪಲ್ಸರಿ ಮೂರು ವಿಷಯಗಳನ್ನ ಹೇಳಿಕೊಡಬೇಕು. ಹೇಗೆ ಹೆಣ್ಣ ಮಕ್ಕಳನ್ನ ಪ್ರೊಟೆಕ್ಟ್ ಮಾಡಬೇಕು, ಹೇಗೆ ಹೆಣ್ಣು ಮಕ್ಕಳಿಗೆ ಸಪೋರ್ಟ್ ಮಾಡಬೇಕು. ಹೆಣ್ಣು ಮಕ್ಕಳಿಗೆ ರೆಸ್ಪೆಕ್ಟ್ ಕೊಡಬೇಕು ಅನ್ನೋ ವಿಷಯಗಳನ್ನ ಹೇಳಿಕೊಡಬೇಕು. ಒಬ್ಬ ರೇಪಿಸ್ಟ್​ಗಳಿಗೆ ಯಾವುದೇ ರೀತಿಯ ಶಿಕ್ಷೆ ಕೊಟ್ರು ಸಮಾಧಾನ ಆಗೋದಿಲ್ಲ. ಇಂತವರನ್ನ ನಡುರಸ್ತೆಯಲ್ಲಿ ನಿಲ್ಸಿ ಜೀವಂತವಾಗಿ ಸುಟ್ಟಾಕಿದ್ರು ಕೂಡ ಸಮಾಧಾನವಾಗಲ್ಲ. ಇಂತವರಿಗೆ ಆ ದೇವರು ಒಳ್ಳೆದನ್ನ ಮಾಡದಿರಲಿ ಅಂತ ಮನಸಾರೆ ಕೇಳಿಕೊಳ್ತೀನಿ ಎಂದಿದ್ದಾರೆ.

ಜೊತೆಗೆ ‘ಈ ವಿಡಿಯೋ ಮಾಡುತ್ತಿರುವ ಉದ್ದೇಶ ಏನಪ್ಪ ಅಂದ್ರೆ, ನನಗೂ ಒಬ್ಬಳು ಹೆಣ್ಣು ಮಗಳು ಇದ್ದಾಳೆ. ಯಾರದ್ದೋ ಮನೆಗೆ ಅನ್ಯಾಯ ಆಗಿದೆ ಅಂದಾಗ, ನಿಜವಾಗಲೂ ಅವರ ಜೊತೆ ಇರಬೇಕು. ದಯವಿಟ್ಟು ಎಲ್ಲರೂ ಧ್ವನಿ ಎತ್ತಿ. ನ್ಯಾಯವನ್ನು ಕೇಳೋಣ. ಇದು ಭಾರತವನ್ನು ಬದಲಾಯಿಸುವ ಸಮಯ’. ನಾವೆಲ್ರೂ ಒಂದಾಗಬೇಕು, ಜೈ ಆಂಜನೇಯ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿಡಿಯೋ ಮೂಲಕ ಹೇಳಿದ್ದಾರೆ.

– ಸ್ವಾತಿ.ಎಸ್​.

- Advertisement -

Latest Posts

Don't Miss