- Advertisement -
ದೇಶದಲ್ಲಿ ಮತ್ತು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಕೊರೊನಾದಿಂದ ಸಾವು ನೋವು ಸಂಭವಿಸುತ್ತಿದೆ. ಮೊದಲೆಲ್ಲ ಪ್ರತಿದಿನ 100 , 200 ಕೇಸ್‌ಗಳು ಕಂಡುಬರುತ್ತಿತ್ತು. ಆದ್ರೆ ಈಗ 4ರಿಂದ 5 ಸಾವಿರ ಕೇಸ್‌ಗಳು ಕಂಡು ಬರುತ್ತಿದೆ. ಇನ್ನು ಸರ್ಕಾರ ಕೂಡ ಕೊರೊನಾ ತಡೆಗಟ್ಟಲು ಹಲವು ಪ್ರಯತ್ನಗಳನ್ನ ಮಾಡಿದ್ರೂ ನೋ ಯ್ಯೂಸ್. ಹಾಗಾಗಿ ಮಾಸ್ಕ್ ಧರಿಸದಿದ್ದರೆ, ಸಾವಿರ ದಂಡ ಹಾಕುವ ರೂಲ್ಸ್ ಕೂಡ ಜಾರಿಯಾಯಿತು.
ಇಂದು ಈ ಬಗ್ಗೆ ಮಾಧ್ಯಮ ಮತ್ತು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿರುವ ಕಾರಣಕ್ಕಾಗಿ ಸಾವಿರದಿಂದ 250 ರೂಪಾಯಿಗೆ ದಂಡ ಇಳಿಸಲಾಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ 100 ರೂಪಾಯಿ ದಂಡ ಇಳಿಸಲಾಗಿದೆ.
ಇಷ್ಟೇ ಅಲ್ಲದೇ, ಮಾಸ್ಕ್ ಧರಿಸುವುದರ ಜೊತೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದನ್ನ ಕೂಡ ಕಡ್ಡಾಯಗೊಳಿಸಲಾಗಿದೆ.
ನಾಗೇಂದ್ರ ಆರುಡಿ, ಕರ್ನಾಟಕ ಟಿವಿ, ಬೆಂಗಳೂರು
- Advertisement -