ಧರ್ಮಸ್ಥಳದ ಮಾಸ್ಕ್‌ಮ್ಯಾನ್ ಅನ್ನ ಎಸ್‌ಐಟಿಗೆ ಕಸ್ಟಡಿಗೆ ನೀಡಿ, ಬೆಳ್ತಂಗಡಿ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. 10 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಮಹತ್ವದ ಆದೇಶ ನೀಡಿದೆ. 2 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿದ SIT ಆಗಸ್ಟ್ 23ರ ಬೆಳಗ್ಗೆ ಚಿನ್ನಯ್ಯನನ್ನ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ನ್ಯಾಯಾಧೀಶರ ಎದುರು ಚಿನ್ನಯ್ಯ ಸತ್ಯ ಒಪ್ಪಿಕೊಂಡಿದ್ದಾನೆ. ಹೌದು ನಾನು ಹೆಣ ಹೂತು ಹಾಕಿದ್ದು ನಿಜ ಎಂದಿದ್ದಾನೆ. ಈ ವೇಳೆ ಚಿನ್ನಯ್ಯ ಬಾಯ್ಬಿಟ್ಟ, ಪ್ರತಿಯೊಂದು ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ. ಅಂತಿಮವಾಗಿ ಹೆಚ್ಚಿನ ವಿಚಾರಣೆಗಾಗಿ, ಎಸ್‌ಐಟಿ ಕಸ್ಟಡಿಗೆ ಚಿನ್ನಯ್ಯನನ್ನು ಒಪ್ಪಿಸಿದೆ. ಇನ್ನು, ಕೋರ್ಟ್‌ಗೆ ಚಿನ್ನಯ್ಯನ ಪರ ಯಾವೊಬ್ಬ ವಕೀಲರು ಹಾಜರಾಗಿರಲಿಲ್ಲ.
ಆಗಸ್ಟ್ 16ರ ಶನಿವಾರದಂದೇ ಎಸ್‌ಐಟಿ ಎದುರು ತಪ್ಪೊಪ್ಪಿಕೊಂಡಿದ್ದನಂತೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ಅಧಿಕಾರಿಗಳು ತಂದಿದ್ರು. ಬಳಿಕ ಆಗಸ್ಟ್ 17ರ ಭಾನುವಾರವೇ ಚಿನ್ನಯ್ಯ ಬಂಧನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸದನ ನಡೆಯುತ್ತಿದ್ದ ಹಿನ್ನೆಲೆ ಬಂಧನ ಪ್ರಕ್ರಿಯೆ ನಿಧಾನವಾಗಿತ್ತಂತೆ.
ಚಿನ್ನಯ್ಯನನ್ನು ಅರೆಸ್ಟ್ ಮಾಡ್ತಿದ್ದಂತೆ, ಮೊಬೈಲ್ ಸೀಜ್ ಮಾಡಲಾಗಿದೆ. ಮೊಬೈಲ್ ರೀಟ್ರೈವ್ ಮಾಡಿಸಲು ಎಸ್‌ಐಟಿ ಮುಂದಾಗಿದೆ. 1 ವರ್ಷದ ಹಿಂದಿನ ಕಾಲ್ ರೆಕಾರ್ಡ್ ಪರಿಶೀಲನೆಗೆ ಸಿದ್ಧತೆ ನಡೆಸಿದೆ.
ಇನ್ನು, ಮೂಲತಃ ಮಂಡ್ಯ ಜಿಲ್ಲೆಯ ಚಿಕ್ಕಬಳ್ಳಿ ಗ್ರಾಮದ ಚಿನ್ನಯ್ಯ, ಸಾಕ್ಷಿ ಸಂರಕ್ಷಣಾ ಕಾಯ್ದೆಯಿಂದ ವಿಮುಖನಾಗಿದ್ದಾನೆ. ಇಷ್ಟು ದಿನ ಹೋದಲ್ಲಿ ಬಂದಲ್ಲಿ ಪೊಲೀಸರ ಪ್ರೊಟೆಕ್ಷನ್ ಇರ್ತಿತ್ತು. ಇದೀಗ, ಮಾಸ್ಕ್‌ಮ್ಯಾನ್ ಚಿನ್ನಯ್ಯನಿಗೆ ನೀಡಿದ್ದ ಭದ್ರತೆಗಳನ್ನು ವಾಪಸ್ ಪಡೆಯಲಾಗಿದೆ.
ಕೊನೆಗೂ ಧರ್ಮಸ್ಥಳದ ಪ್ರಕರಣ ರಣರೋಚಕ ಘಟ್ಟ ತಲುಪಿದೆ