7 ನಿಮಿಷಕ್ಕಷ್ಟೇ ವಿಶ್ವದ ಶ್ರೀಮಂತನಾದ ಯ್ಯೂಟೂಬರ್: ಹೇಗೆ..? ಏನಿದು ಸುದ್ದಿ..?

ಅಮೇಜಾನ್‌ನ ಒಡೆಯ ಜೆಫ್ ಬೆಜಾಜ್‌ನನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಶ್ರೀಮಂತ ಎನ್ನಿಸಿಕೊಂಡವರು ಎಲಾನ್ ಮಸ್ಕ್. ಆದ್ರೆ ಫೆಬ್ರವರಿ 13ರಂದು ಬರೀ 7 ನಿಮಿಷಕ್ಕಾಗಿ ಎಲಾನ್ ಮಸ್ಕ್‌ನ್ನು ಹಿಂದಿಕ್ಕಿದ, ಯೂಟ್ಯೂಬರ್‌ ಒಬ್ಬ ದೇಶದ ನಂಬರ್ ಒನ್ ಶ್ರೀಮಂತನಾಗಿದ್ದ. ಅವನ ಹೆಸರು Max Fosh. ಈತನಿಗೆ ಹೇಳಿಕೊಳ್ಳುವಂಥ ಸಬ್‌ಸ್ಕ್ರೈಬರ್ಸ್ ಏನಿಲ್ಲ. ವೀವ್ಸ್ ಕೂಡ ಅಷ್ಟಕ್ಕಷ್ಟೇ. ಆದ್ರೂ ಕೂಡ ಈತ, ಎಲಾನ್‌ ಮಸ್ಕ್‌ನನ್ನು ಹಿಂದಿಕ್ಕಿ ಬರೀ 7 ನಿಮಿಷದ ಸಲುವಾಗಿ ಶ್ರೀಮಂತನಾಗಿದ್ದ. ಈಗ ಇವನು ಸುದ್ದಿಯಲ್ಲಿದ್ದ ಕಾರಣ, ಇವನ ಸಬ್‌ಸ್ಕ್ರೈಬರ್ಸ್ ಹೆಚ್ಚಾಗಿದ್ದಾರೆ.

ನಮಗೆ ನಿಮಗೆಲ್ಲ ಗೊತ್ತಿರುವ ಹಾಗೆ ಷೇರು ಮಾರುಕಟ್ಟೆಯಲ್ಲಿ ಆದಾಯ ಏರಿಕೆ ಇಳಿಕೆಯಾಗುತ್ತಲೇ ಇರುತ್ತದೆ. ಇದೇ ಕಾರಣಕ್ಕೆ ಎಲಾನ್‌ನ್ನು ಹಿಂದಿಕ್‌ಕಿದ್ದ ಮ್ಯಾಕ್ಸ್, ಶ್ರೀಮಂತನಾಗಿದ್ದ. ಆದ್ರೆ ಕೆಲ ಸಮಯದಲ್ಲೇ ಷೇರು ಬೆಲೆ ಇಳಿಕೆಯಾಗಿದ್ದು, ಕಂಪೆನಿ ನಿಯಮವನ್ನ ಕೂಡ ಮ್ಯಾಕ್ಸ್ ಫಾಲೋ ಮಾಡಬೇಕಾಗಿದ್ದು, ಈ ಕಾರಣಕ್ಕೆ 7 ನಿಮಿಷದ ಬಳಿಕ ಯ್ಯೂಟ್ಯೂಬರ್ ಯಥಾ ಸ್ಥಿತಿಗೆ ಮರಳಿದ್ದಾನೆ.

ಆದ್ರೆ ಲಂಡನ ಮೂಲದ ಮ್ಯಾಕ್ಸ್ ಸಾಧಾರಣ ವ್ಯಕ್ತಿ ಏನಲ್ಲ. ಇವನು ಶ್ರೀಮಂತ ವ್ಯಕ್ತಿಯೇ. ಇವನ ಚಾನೆಲ್‌ನಲ್ಲಿ ಬರುವ ವ್ಲೋಗ್ ಪ್ರಕಾರ, ಇವನು ಏರ್‌ಲೈನ್ಸ್ ಖರೀದಿಸಿದ ಮೊದಲ ಯೂಟ್ಯೂಬರ್ ಅಂತೆ. ಇವನು ತನ್ನ ಯೂಟ್ಯೂಬ್‌ನಲ್ಲಿ ವ್ಲೋಗ್ಸ್, ಸ್ಟ್ಯಾಂಡಪ್ ಕಾಮಿಡಿ ಎಲ್ಲ ಮಾಡುತ್ತಾನೆ. ಇನ್ನು ತಾನು 7 ನಿಮಿಷ ಪ್ರಪಂಚದ ಶ್ರೀಮಂತ ವ್ಯಕ್ತಿಯಾಗಿದ್ದು ಹೇಗೆ ಅನ್ನೋದರ ಬಗ್ಗೆ ಮ್ಯಾಕ್ಸ್ ತನ್ನ ಚಾನೆಲ್‌ನಲ್ಲಿ ವೀಡಿಯೋ ಮಾಡಿ, ವಿವರಿಸಿದ್ದಾನೆ.

About The Author