Political News: ಹುಬ್ಬಳ್ಳಿಯ ನೆಹರು ಮೈದಾನದಲ್ಲಿಂದು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತವಾಗಿ ಎಂಟು ದಾಖಲೆಯ ಗೆಲುವು ಸಾಧಿಸಿ, 45 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ವಿಧಾನ ಪರಿಷತ್ ಸಭಾಪತಿಗಳಾಗಿರುವ, ಹಿರಿಯ ನಾಯಕರಾದ ಸನ್ಮಾನ್ಯ ಬಸವರಾಜ ಹೊರಟ್ಟಿ ಅವರಿಗೆ “ಗೌರವ ಸನ್ಮಾನ ಕಾರ್ಯಕ್ರಮ” ನಡೆಸಲಾಯಿತು.
ಈ ವೇಳೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಹ್ಯಾಂಡಸಮ್ ಟೀಚರ್ ಅಂಡ್ ಇಂಟಲಿಜೆಂಟ್ ಪೊಲಿಟಿಷಿಯನ್ ಮತ್ತು ಸಿನ್ಸಿಯರ್ ಫೈಟರ್ ಬಸವರಾಜ ಹೊರಟ್ಟಿ ಅವರು ಉತ್ತರ ಕರ್ನಾಟಕದ ಧ್ವನಿಯಾಗಿ ಸದಾಕಾಲ ಕೆಲಸ ಮಾಡಿದ್ದಾರೆ. ಅವರು ಮುಂದೆ ಇದ್ದರೆ ನಾವೆಲ್ಲ ಅವರ ಜೊತೆಗೆ ಹೆಜ್ಜೆಗೆ ಹೆಜ್ಜೆ ಇಟ್ಟು ಕರ್ನಾಟಕವನ್ನು ವಿಶೇಷವಾಗಿ ಉತ್ತರ ಕರ್ನಾಟಕವನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡೋಣ ಎಂದಿದ್ದಾರೆ.
ನಮ್ಮ ಹೊರಟ್ಟಿ ಮಾಸ್ತರು ಪ್ರತಿಯೊಬ್ಬ ಶಿಕ್ಷಕರ ಹೃದಯದಲ್ಲಿ ಶಾಸ್ವತ ಸ್ಥಾನ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ನಲವತ್ತೈದು ವರ್ಷ ಇದ್ದರೆ, ಶಿಕ್ಷಕರ ಹೃದಯದಲ್ಲಿ ಶಾಸ್ವತ ಸ್ಥಾನ ಮಾಡಿದ್ದಾರೆ. ಅಂತ ಅಪರೂಪದ ವ್ಯಕ್ತಿತ್ವದ ಹೊರಟ್ಟಿಯವರಿಗೆ ಸಾವುರಾರು ಅಭಿನಂದನೆಗಳು. ಹೊರಟ್ಟಿ ಸರ್ ಮಣ್ಣಿನ ಮಗ ಅವರು ತಮ್ಮತನದ ಅಭಿಮಾನ ಯಾವತ್ತು ಬಿಟ್ಟಿಲ್ಲ.
ಅವರ ಯಶಸ್ಸಿನ ಗುಟ್ಟು ಅವರ ಸ್ವಾಭಿಮಾನ, ಅವರು ಎಂದೂ ಸ್ವಾಭಿಮಾನದಲ್ಲಿ ರಾಜಿ ಮಾಟಿಕೊಂಡಿಲ್ಲಾ ಹೀಗಾಗಿ ಅವರದು ಸ್ವಾಭಿಮಾನ ಭರಿತ ವ್ಯಕ್ತಿತ್ವ ಹೊರಟ್ಟಿಯವರು ಎಂ ಎಲ್ ಸಿ ಆಗುವ ಮುಂಚೆಯೇ ಪರಿಚಯ ಅವರು ಮಾಸ್ತರ ಇದ್ದರು ಅವರ ಜೊತೆಗೆ ನಮ್ಮ ಮಾವ ಕೆ.ವಿ ಶಂಕರ ಗೌಡರು ಬಹಳ ಆತ್ಮೀಯರು ಹಿಂಗಾಗಿ ಆಗಿನಿಂದಲೂ ನನಗೆ ಆತ್ಮೀಯರಾಗಿ, ಹಿರಿಯರಾಗಿ ಪರಿಚಯ. ಮುಂದೆ 1980 ರಲ್ಲಿ ಅವರು ಚುನಾವಣೆ ನಿಂತರು ಆಗ ಎಸ್ ಐ ಶೆಟ್ಟರ ಅಂತ ನಮ್ಮ ಪಕ್ಷದಿಂದ ನಿಂತಿದ್ದರು ಎಂದು ಮಾಜಿ ಸಿಎಂ ಹೇಳಿದ್ದಾರೆ.




