ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಡಿ ಜಿ ಪೇ ಕಾರ್ಯಕ್ರಮ ಯಶಸ್ವಿಯಾಗಿಲಿ: ಕೆ.ಷಡಕ್ಷರಿ

Tipaturu: ತಿಪಟೂರು: ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಆಯುಧಪೂಜೆ ಪ್ರಯುಕ್ತವಾಗಿ ಕಛೇರಿಯಲ್ಲಿ ಲಕ್ಷ್ಮಿಪೂಜೆ ಹಾಗೂ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಆಗಮಿಸಿದ ತಾಲ್ಲೂಕಿನ ಶಾಸಕರಾದ ಕೆ.ಷಡಕ್ಷರಿಯವರು ಕಛೇರಿಯಲ್ಲಿ ಧಾರ್ಮಿಕ ವಿಧಿವಿದಾನಗಳನುಸಾರ ನೆರವೇರಿಸುತ್ತಿರುವ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ತಾಲ್ಲೂಕಿನ ನಾಗರಿಕರಿಗೂ ಹಾಗೂ ಜನಸಾಮಾನ್ಯರಿಗೂ ಉಪಯೋಗವಾಗುವ ಡಿ ಜಿ ಪೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರಾದ ಕೆ ಷಡಕ್ಷರಿ ರವರು ಈ ಒಂದು ಡಿ ಜಿ ಪೇ ವ್ಯವಸ್ಥೆಯು ಹಳ್ಳಿಯ ಜನಸಾಮಾನ್ಯರಿಗೆ, ಮಹಿಳೆಯರಿಗೆ ಹಾಗೂ ರೈತಭಾಂದವರಿಗೆ ಬಹಳ ಉಪಯುಕ್ತವಾಗಿದ್ದು, ಇನ್ನು ಮುಂದೆ ತಿಪಟೂರಿನ ಎಲ್ಲಾ ಜನರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಹಕ ಸೇವಾ ಕೇಂದ್ರದಲ್ಲಿ ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ತಮ್ಮ ಯಾವುದೇ ಬ್ಯಾಂಕ್ ಖಾತೆಯಲ್ಲಿರುವ ಮೊತ್ತ ರೂ.500 ರಿಂದ ರೂ 10 ಸಾವಿರದವರೆಗೆ ಆಧಾರ್ ಕಾರ್ಡ್ ಹಾಗೂ ಬೆರಳಚ್ಚು ಕೊಡುವುದರ ಮುಖೇನ ಹಣದ ನಗದೀಕರಣ ಮಾಡಿಕೊಳ್ಳಬಹುದಾಗಿದೆ. ಇಷ್ಟಲ್ಲದೇ ಎಟಿಎಮ್ ಹೊಂದಿರುವ ವ್ಯಕ್ತಿಯೋರ್ವ ದಿನವೊಂದಕ್ಕೆ ರೂ.500 ರಿಂದ ರೂ 25 ಸಾವಿರದವರೆಗೆ ಹಣವನ್ನು ಪಡೆಯುವ ಸೌಲಭ್ಯವಿದ್ದು ಇದರ ಪ್ರಯೋಜನವನ್ನು ತಾಲ್ಲೂಕಿನ ಎಲ್ಲಾ ಜನಸಾಮಾನ್ಯರು ಸದ್ಬಳಿಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.

ನಂತರ ಮಾತನಾಡಿದ ಶ್ರೀ ಶ್ರೀ ಸದ್ಗುರು ಹಿಮ್ಮಡಿ ಕರಿಬಸವ ದೇಶೀಕೇಂದ್ರ ಮಹಾಸ್ವಾಮಿಜಿಗಳು ಈ ಡಿ ಜಿ ಪೇ ಕಾರ್ಯಕ್ರಮವು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದು ಇಂತಹ ಅತ್ಯದ್ಭುತ ಸೇವೆಯನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ರಾಜ್ಯದ ಜನತೆಗೆ ಉಚಿತವಾಗಿ ಒದಗಿಸಿಕೊಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದ್ದು ಇದರ ಸಂಪೂರ್ಣ ಉಪಯೋಗವನ್ನು ರಾಜ್ಯದ ಎಲ್ಲಾ ಜನತೆ ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಮೋಹನ್ ಕುಮಾರ್,ತಾಲ್ಲೂಕು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುದರ್ಶನ್, ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಉದಯ್.ಕೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಸಿಬ್ಭಂದಿ ವರ್ಗದವರು ಉಪಸ್ಥಿತರಿದ್ದರು.

About The Author