Thursday, July 25, 2024

Latest Posts

Delivery Pain: ಸಭೆಯಲ್ಲಿ ತುಂಬು ಗರ್ಭಿಣಿಗೆ ಹೆರಿಗೆ ನೋವು: ಆಸ್ಪತ್ರೆಗೆ ದಾಖಲು..!

- Advertisement -

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ತುಂಬು ಗರ್ಭಿಣಿ ಪಾಲಿಕೆ ಸದಸ್ಯೆ ಆಗಮಿಸಿದ್ದರು. ಆದ್ರೆ ಸಭೆಗೆ ಆಗಮಿಸುತ್ತಿದಂತೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಾನಗರ ಪಾಲಿಕೆ ಸದಸ್ಯೆ ಸರಸ್ವತಿ ಧೋಂಗಡಿ ಎಂಬುವವರೇ ಆಸ್ಪತ್ರೆಗೆ ದಾಖಲಾದ ಸದಸ್ಯೆಯಾಗಿದ್ದಾರೆ. ಇಂದು ನವೀಕರಣಗೊಂಡ ಪಾಲಿಕೆಯ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯುತ್ತಿತ್ತು. ಸಾಮಾನ್ಯ ಸಭೆಗೆ ವಾರ್ಡ್ ನಂಬರ್ 54ರ ಸದಸ್ಯೆ ಸರಸ್ವತಿ ಧೋಂಗಡಿಯವರು ತುಂಬು ಗರ್ಭಿಣಿಯಾಗಿದ್ದರು ಕೂಡ ಸಭೆಗೆ ಬಂದಿದ್ದರು.

ಇನ್ನೂ ಸಭೆಯಲ್ಲಿಯೇ ಆಯಾಸವಾಗಿದ್ದು, ಸರಸ್ವತಿ ಧೋಂಗಡಿಯವರು ಮತ್ತೋರ್ವ ಸದಸ್ಯರ ಸಹಾಯದಿಂದ ನಿರ್ಗಮಿಸಿದ್ದಾರೆ. ಆದರೆ ಪಾಲಿಕೆಯ ಲಿಪ್ಟ್ ಅವ್ಯವಸ್ಥೆಯಿಂದ ಸುಮಾರು ಹೊತ್ತು ಕಾಯುವಂತಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Drought area: ಬರಗಾಲ ಘೋಷಣೆ ಮಾಡುವಂತೆ ರೈತರಿಂದ ಪ್ರತಿಭಟನೆ.

Bendre: ಬೇಂದ್ರೆ ಜನ್ಮ ದಿನವನ್ನು ವಿಶ್ವ ಕವಿ ದಿನವನ್ನಾಗಿ ಆಚರಿಸಲು ಸರ್ಕಾರಕ್ಕೆ ಮನವಿ

Gurukula:ಗಂಗೂಬಾಯಿ ಹಾನಗಲ್ ಗುರುಕುಲಕ್ಕೆ ಆರ್ಥಿಕ ಸಂಕಷ್ಟ..!

- Advertisement -

Latest Posts

Don't Miss