ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ತಮ್ಮ ಅಧಿಕಾರವನ್ನು ನೇರವಾಗಿ ಬಳಸಿಕೊಂಡು ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದ್ದು ಮನೆ ಒಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಇನ್ನೊಂದೆಡೆ, ಮನೆಯ ಮೂಲ ನಿಯಮ ಉಲ್ಲಂಘಿಸಿ ಉದ್ಧಟತನ ಮೆರೆದಿದ್ದಕ್ಕಾಗಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರಿಗೆ ನೇರ ನಾಮಿನೇಶನ್ ಜಾರಿ ಮಾಡಲಾಗಿದೆ.
8ನೇ ವಾರದ ನಾಮಿನೇಷನ್ ಸಂಪೂರ್ಣ ಡ್ರಾಮಾ ಸೃಷ್ಟಿಸಿತ್ತು ಅಂತ ಹೇಳ್ಬಹುದು. ಮನೆಯ ಸದಸ್ಯರ ಆಯ್ಕೆಯಂತೆ ಅಭಿಷೇಕ್, ಮಾಳು ನಿಪನಾಳ, ರಿಷಾ, ಧ್ರುವಂತ್, ರಾಶಿಕಾ ಶೆಟ್ಟಿ, ಸೂರಜ್ ಸಿಂಗ್ ಮತ್ತು ಸ್ಪಂದನಾ, ಈ ಏಳು ಜನರ ಹೆಸರುಗಳೂ ನಾಮಿನೇಷನ್ ಪಟ್ಟಿಯಲ್ಲಿ ಸೇರಿವೆ. ಆದರೆ ಹೆಚ್ಚು ಗಮನಸೆಳೆದದ್ದು ರಘು ತೆಗೆದುಕೊಂಡ ದೊಡ್ಡ ನಿರ್ಧಾರ. ರಕ್ಷಿತಾ ಮಾಡಿದ ಪುಟ್ಟ ತಪ್ಪು ಈಗ ಮನೆಯೊಳಗೆ ದೊಡ್ಡ ಪರಿಣಾಮ ತೋರಿಸಿದೆ.
ಹಿಂದಿನವಾರ ರಕ್ಷಿತಾ ನಾಮಿನೇಷನ್ ಪ್ರಕ್ರಿಯೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ರಘು ಹೆಸರನ್ನೇ ನಾಮಿನೇಟ್ ಮಾಡಿದ್ದರು. ಅದರಿಂದ ರಘು ಅವರಿಗೆ ತುಂಬ ಬೇಸರ ಆಗಿತ್ತು. “ಅವಳನ್ನು ಚಿಕ್ಕ ತಂಗಿಯಂತೆ ನೋಡುತ್ತಿದ್ದೆ… ಆದರೆ ಅವಳಿಂದ ನನಗೆ ಸ್ವಲ್ಪ ಬೇಸರ ಆಯ್ತು” ಎಂದು ರಘು ಮನದಾಳದ ಮಾತನ್ನೇ ಹೊರ ಹಾಕಿದರು. ಬಿಗ್ ಬಾಸ್ , ಕ್ಯಾಪ್ಟನ್ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಹೇಳುತ್ತಿದ್ದಂತೆಯೇ ರಘು ಯಾವುದೇ ಸಂಶಯವಿಲ್ಲದೆ ರಕ್ಷಿತಾ ಹೆಸರನ್ನೇ ಹೇಳಿದರು.
ಮತ್ತೊಂದೆಡೆ, ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಕಿಚ್ಚ ಸುದೀಪ್ ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿ ಡ್ರೆಸಿಂಗ್ ರೂಮ್‌ನಲ್ಲಿ ಪಿಸುದನಿಯಲ್ಲಿ ಮಾತನಾಡಿದ್ದು ಈಗ ಅವರಿಗೆ ಬೂಮರಾಂಗ್ ಆಗಿದೆ. ಮೂಲ ನಿಯಮ ಉಲ್ಲಂಘನೆ ಮಾಡಿದ ಕಾರಣ ಇಬ್ಬರೂ ನೇರವಾಗಿ ನಾಮಿನೇಟ್ ಆಗಿದ್ದಾರೆ.ಇದರ ಮದ್ಯೆ ನಾನ್ ಮನೆ ಬಿಟ್ಟು ಹೋಗ್ತೀನಿ ಡೋರ್ ತೆಗೀರಿ ಅಂತ ಅಶ್ವಿನಿ ಗೌಡ ಒಂದ್ಕಡೆ ಗೋಳಾಡ್ತಾ ಇದಾರೆ,
ಒಟ್ಟಿನಲ್ಲಿ, ಈ ವಾರದ ನಾಮಿನೇಷನ್ ಬಿಗ್ ಬಾಸ್ ಮನೆಯಲ್ಲಿ ಹೊಸ ಅಲೆಗಳನ್ನು ಎಬ್ಬಿಸಿದೆ—ಯಾರು ಉಳಿಯುತ್ತಾರೆ? ಯಾರು ಔಟ್ ಆಗುತ್ತಾರೆ? ಅನ್ನೋದನ್ನ ವಾರಾಂತ್ಯದ ವರೆಗೂ ಕಾದು ನೋಡಬೇಕಾಗಿದೆ….
ವರದಿ : ಗಾಯತ್ರಿ ಗುಬ್ಬಿ

