Sandalwood: ಮಾಸ್ಕ್ ಧರಿಸಿ ಬಸವನಗುಡಿ ಕಡ್ಲೇಕಾಯಿ ಪರೀಷೆ ಎಂಜಾಯ್ ಮಾಡಿದ ನಟಿ ರಚಿತಾ ರಾಮ್

Bengaluru News: ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆ ನಡೆಯುತ್ತಿದೆ. ಇಲ್ಲಿ ತರಹೇವಾರಿ ಕಡಲೇಕಾಯಿಗಳು ಮಾರಲು ಬರುವುದಲ್ಲದೇ, 5 ದಿನಗಳ ಜಾತ್ರೆಯನ್ನು ಸಹ ನಾವು ಎಂಜಾಯ್ ಮಾಡಬಹುದು. ಸಾಮಾನ್ಯ ಜನರು ಹೇಗೋ ಇದನ್ನು ಎಂಜಾಯ್ ಮಾಡಬಹುದು. ಆದರೆ ಸೆಲೆಬ್ರಿಟಿಗಳು ಸಾಮಾನ್ಯ ಜನರಂತೆ ಪರೀಷೆಯನ್ನು ಎಂಜಾಯ್ ಮಾಡಲು ಆಗೋದಿಲ್ಲ.

ಅವರ ಫ್ಯಾನ್ಸ್ ಅವರ ಬಳಿ ಬಂದು ಫೋಟೋಗಾಗಿ ವಿನಂತಿಸುತ್ತಾರೆ. ಹಾಗಾಗಿ ಜಾತ್ರೆಯನ್ನು ಸೆಲೆಬ್ಸ್ ಎಂಜಾಯ್ ಮಾಡಲು ಸಾಧ್ಯವಾಗೋದಿಲ್ಲಾ. ಹಾಗಾಗಿ ಸೆಲೆಬ್ಸ್ ಈಗ ಮುಖವಾಡ ಹಾಕೋಂಡು ಜಾತ್ರೆಗಳನ್ನು, ಕಾರ್ಯಕ್ರಮವನ್ನು ಎಂಜಾಯ್ ಮಾಡಲು ಶುರು ಮಾಡಿದ್ದಾರೆ. ಮಂಗಳೂರು ದಸರಾದಲ್ಲಿ ನಟ ರಾಜ್. ಬಿ.ಶೆಟ್ಟಿ, ನಟಿ ಅನುಶ್ರೀ ಅವರು ಮಾಸ್ಕ್ ಹಾಕಿಯೇ ದಸರಾ ಎಂಜಾಯ್ ಮಾಡಿದ್ದರು.

ಅದೇ ರೀತಿ ಈಗ ರಚಿತಾ ರಾಮ್ ಕೂಡ ಮಾಸ್ಕ್ ಹಾಕಿಯೇ ಪರೀಷೆಯನ್ನು ಎಂಜಾಯ್ ಮಾಡಿದ್ದಾರೆ. ಈ ವೇಳೆ ಅವರನ್ನು ಯಾರೂ ಗುರುತಿಸಲೇ ಇಲ್ಲ. 18 ವರ್ಷಗಳ ಬಳಿಕ ಪರೀಷೆಯನ್ನು ಎಂಜಾಯ್ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

About The Author