ಇವತ್ತು ದೇಶದೆಲ್ಲೆಡೆ ಸಂಕ್ರಾಂತಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗ್ತಾ ಇದೆ. ದೇವರೊಂದೆ ನಾಮ ಹಲವು ಎಂಬಂತೆ, ಮಕರ ಸಂಕ್ರಾಂತಿಯನ್ನ ಬೇರೆ ಬೇರೆ ರಾಜ್ಯಗಳಲ್ಲಿ , ಬೇರೆ ಬೇರೆ ಹೆಸರುಗಳಿಂದ ಕರೆಯಲಾಗತ್ತೆ. ಬೇರೆ ಬೇರೆ ರೀತಿ ಸೆಲೆಬ್ರೇಟ್ ಮಾಡಲಾಗತ್ತೆ. ಅದೇ ರೀತಿ ಆಂಧ್ರಪ್ರದೇಶದಲ್ಲಿ ಪೊಂಗಲ್ ಹಬ್ಬವನ್ನ ಭರ್ಜರಿಯಾಗೇ ಸೆಲೆಬ್ರೇಟ್ ಮಾಡ್ತಾರೆ. ಮೆಗಾಸ್ಟಾರ್ ಚಿರಂಜೀವಿ ಕುಟುಂಬಸ್ಥರು ಕೂಡ, ಪೊಂಗಲ್ ಹಬ್ಬವನ್ನ ಖುಷಿ ಖುಷಿಯಾಗಿ ಸೆಲೆಬ್ರೇಟ್ ಮಾಡಿದ್ದಾರೆ.
https://www.instagram.com/p/CYspY97JOZy/
ಈ ಪೊಂಗಲ್‌ನಲ್ಲಿ, ಸ್ವೀಟ್ ಪೊಂಗಲ್ ಮತ್ತು ದೋಸೆಯೇ ಮೇನ್ ತಿಂಡಿ. ಚಿರಂಜೀವಿ ಮತ್ತು ನಟ ವರುಣ್ ಸೇರಿ ದೋಸೆ ಮಾಡುತ್ತಿದ್ದು, ಈ ವೀಡಿಯೋವನ್ನ ವರುಣ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇಬ್ಬರ ಮಧ್ಯೆ ಕಾಂಪಿಟೇಶನ್ ಏರ್ಪಟ್ಟಿದ್ದು, ವರುಣ್ ಚೆನ್ನಾಗಿ ದೋಸೆ ಮಾಡಿದ್ದರು. ಚಿರು ದೋಸೆ ಮಾಡುವಾಗ ಎಡವಟ್ಟು ಮಾಡಿದ ಕಾರಣ, ಅವರ ದೋಸೆ ಶೇಪ್ ಹಾಳಾಗಿತ್ತು. ಅದಕ್ಕೆ ಚಿರು ವರುಣ್ ದೋಸೆ ಶೇಪ್ ಕೂಡ ಹಾಳು ಮಾಡಿಬಿಟ್ಟರು. ಆದ್ರೂ ಈ ದೃಶ್ಯ ನೋಡೋಕ್ಕೆ ಸಖತ್ ಮಜವಾಗಿದೆ.
https://www.instagram.com/p/CYtMVb-otTz/
ಇನ್ನು ಚಿರಂಜೀವಿ ಫ್ಯಾಮಿಲಿ ಜೊತೆ, ಅಲ್ಲು ಅರ್ಜುನ್ ಕುಟುಂಬಸ್ಥರು ಕೂಡ ಸೇರಿದ್ದು, ನಿರ್ಮಾಪಕ ಅಲ್ಲು ಅರವಿಂದ ಕೂಡ ಭಾಗವಹಿಸಿದ್ದರು. ರಾಮ್ ಚರಣ್, ಸಾಯಿ ಧರಂ ತೇಜ್, ನಿಹಾರಿಕಾ ಸೇರಿ ಎಲ್ಲ ಕುಟುಂಬಸ್ಥರು ಫ್ಯಾಮಿಲಿ ಗೆಟ್-ಟೂ-ಗೆದರ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಶ್ ಮಾಡಿರುವ ಚಿರಂಜೀವಿ, ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದಿದ್ದಾರೆ. ಈ ವೀಡಿಯೋದಲ್ಲಿ ಕುಟುಂಬಸ್ಥರೆಲ್ಲರೂ ಹಬ್ಬಕ್ಕೆ ಶುಭಕೋರಿದ್ದಾರೆ.




