Film News: ತನ್ನ ಮೊದಲ ಧಾರಾವಾಹಿ ಮೂಲಕ ಫೇಮಸ್ ಆಗಿ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿರೋ ಮೇಘಾ ಶೆಟ್ಟಿ ಒಂದು ಪೋಸ್ಟ್ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮೇಘಾ ಶೆಟ್ಟಿ ಮದುವೆಯಾಗುತ್ತಿದ್ದಾರಾ ಅನ್ನೋ ಮಾತು ಕೇಳಿ ಬರುತ್ತಿದೆ.
ಮೊದಲ ಧಾರಾವಾಹಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮೇಘಾ, ಸದ್ಯ ಸಿನಿಮಾ ಕಡೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ.
ಮೇಘಾ ಶೆಟ್ಟಿಯನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿ ಬಳಗ ಕಾತುರವಾಗಿದೆ. ಮೇಘಾ ಶೆಟ್ಟಿ ಅವರನ್ನು ಲಕ್ಕಿ ಹೀರೋಯಿನ್ ಎಂದರೆ ತಪ್ಪಾಗಲಾರದು. ಯಾಕೆಂದರೆ, ಮೇಘಾ ನಟಿಸಿದ ಮೊದಲ ಧಾರಾವಾಹಿಯೇ ಸೂಪರ್ ಡೂಪರ್ ಹಿಟ್ ಆಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.
ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್. ತಮ್ಮ ಅಭಿಮಾನಿಗಳಿಗಾಗಿ ಆಗಾಗ ರೀಲ್ಸ್, ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ವಿಭಿನ್ನ ಲೆಹಂಗಾ ತೊಟ್ಟು, ಪಿಂಕ್ ರೋಸ್ ಮುಡಿದು ಮೇಘಾ ಶೆಟ್ಟಿ ಅವರು ಅಪ್ಸರೆಯ ಹಾಗೆ ಕಾಣುತ್ತಿದ್ದಾರೆ. ಇದರ ಫೋಟೋ ಶೂಟ್ ಮಾಡಿಸಿದ್ದಾರೆ.
ಇದಕ್ಕೆ ಲೈಕ್ಸ್, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಲವ್ ಯೂ, ಲುಕಿಂಗ್ ಕ್ಯೂಟ್, ನಿಮ್ಮನ್ನು ಮದುವೆಯಾಗುವರು ಪುಣ್ಯ ಮಾಡಿದ್ದಾರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
Love story : ಹೊಸ ದಾಖಲೆ ನಿರ್ಮಿಸಲು ಹೊರಟ ಸಂಜು: 55 ನಿಮಿಷದ ಒಂದು ಪ್ರೇಮಕಥೆ