Sunday, September 8, 2024

Latest Posts

ಕಾರ್ತಿಕ ದೀಪದ 365 ಬತ್ತಿಗಳ ಪುಣ್ಯ ಫಲ…!

- Advertisement -

Devotional:

ನಿರ್ಮಲವಾದ ಆಕಾಶದಲ್ಲಿ ಚಂದ್ರನು ಬೆಳ್ಳಿಯ ಬೆಳಕನ್ನು ಕೊಡುವ ಸಮಯ, ಈ ದಿನ ಭಕ್ತರಿಂದ ದೇವಾಲಯವು ಕಂಗೊಳಿಸುತ್ತಿರುತ್ತದೆ. ಎಲ್ಲೆಡೆ ಕಣ್ಣುಗಳನ್ನು ಕಟ್ಟಿಹಾಕುವ ದೀಪಾಲಂಕಾರಗಳು ಆಧ್ಯಾತ್ಮಿಕ ಆನಂದವನ್ನುಂಟು ಮಾಡುವ ಶಿವಕೇಶವರ ನಾಮಸ್ಮರಣೆ, ಸಂಪ್ರದಾಯಕ್ಕೆ ಸಂಕೇತವಾಗಿ ಹೆಣ್ಣು ಮಕ್ಕಳ ರೇಷ್ಮೆ ಸೀರೆಗಳು, ಕಾರ್ತೀಕ ಪೌರ್ಣಮಿಯಂದು ಮೋನೋಹರವಾಗಿ ಕಾಣುವ ದೃಶಗಳು ಪ್ರತ್ಯೇಕ ವಾಗಿರುತ್ತದೆ .

ಕಾರ್ತಿಕ ಮಾಸವು ಶಿವ ಕೇಶವರಿಗೆ ಅತ್ಯಂತ ಮಂಗಳಕರವಾದ ಮಾಸವಾಗಿದೆ. ಈ ತಿಂಗಳು ಪೂರ್ತಿ ದೇವಾಲಯಗಳಲ್ಲಿ ಹಬ್ಬದ ವಾತಾವರಣ ವಿರುತ್ತದೆ. ಕಾರ್ತಿಕ ಮಾಸದಲ್ಲಿ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಹೋಮಗಳು, ವ್ರತಗಳು ನಡೆಸಲಾಗುತ್ತದೆ ಮತ್ತು ಶಿವನಜಪ ಎಲ್ಲೆಡೆ ಪ್ರತಿಧ್ವನಿಸುತ್ತದೆ. ಈ ತಿಂಗಳಲ್ಲಿ ಬರುವ ಹುಣ್ಣಿಮೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಪೌರ್ಣಮಿಯ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದೀಪಗಳನ್ನು ಹಚ್ಚುತ್ತಾರೆ. ಆದರೆ ಕಾರ್ತಿಕ ಪೌರ್ಣಮಿಯಂದು ಇಡೀ ದಿನ ಉಪವಾಸವಿದ್ದು, ಸಾಯಂಕಾಲ 365 ಬತ್ತಿಗಳನ್ನು ಬೆಳಗಿದರೆ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ .

ದೀಪವು ಪರಬ್ರಹ್ಮ ಸ್ವರೂಪ. ಯಾರ ಮನೆಯಲ್ಲಿ ಧೂಪ, ದೀಪ, ನೈವೇದ್ಯಗಳನ್ನು ನಿತ್ಯವೂ ಮಾಡಲಾಗುತ್ತದೆಯೋ ಆ ಮನೆಯು ಅಷ್ಟೈಶ್ವರ್ಯದಿಂದ ಕೂಡಿರುತ್ತದೆ. ಮನೆಯಲ್ಲಿ ದಿನಾಗಲೂ ದೀಪ ಹಚ್ಚುವುದು ಶುಭ. ಆದರೆ ಆಧುನಿಕ ಜೀವನದಲ್ಲಿ ಜನರು ದಿನವೂ ದೀಪ ಹಚ್ಚುವುದಿಲ್ಲ. ಅದಕ್ಕಾಗಿಯೇ ಹಿರಿಯರು ಕಾರ್ತಿಕ ಹುಣ್ಣಿಮೆಯಂದು ಒಂದು ವಿಧಾನವನ್ನು ಸೂಚಿಸಿದರು. ವರ್ಷದಲ್ಲಿ 365 ದಿನಗಳು ಇರುವುದರಿಂದ ದಿನಕ್ಕೆ ಒಂದು ಬತ್ತಿಯಂತೆ 365 ಬತ್ತಿಗಳನ್ನು ಜೋಡಿಸಿ ಹಸುವಿನ ತುಪ್ಪದಲ್ಲಿ ನೆನೆಸಿ. ಹತ್ತಿರದ ದೇವಸ್ಥಾನದಲ್ಲಿ ದೀಪ ಹಚ್ಚುವುದರಿಂದ ವರ್ಷಪೂರ್ತಿ ದೀಪ ಬೆಳಗಿದ ಪುಣ್ಯ ಲಭಿಸುತ್ತದೆ ಎನ್ನುತ್ತಾರೆ ಹಿರಿಯರು. ಹಾಗೂ ತ್ರಿಮೂರ್ತಿಗಳ ಅನುಗ್ರಹ ಸಿಗುತ್ತದೆ.

ಕಾರ್ತಿಕ ಹುಣ್ಣಿಮೆಯಂದು ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಆಚರಿಸುವುದರಿಂದ ಶುಭ ಫಲ ದೊರೆಯುತ್ತದೆ. ಶಿವಾಲಯಗಳಲ್ಲಿ ಸಹಸ್ರ ಲಿಂಗಾರ್ಚನೆ, ಮಹಾಲಿಂಗಾರ್ಚನೆ ಮಾಡುವವರಿಗೆ ಸಕಲ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ನಮ್ಮ ಪುರಾಣಗಳು ಹೇಳುತ್ತದೆ.

ಕಾರ್ತಿಕ ಮಾಸದಲ್ಲಿ ಪ್ರತಿದಿನ ಹೀಗೆ ಪೂಜೆ ಮಾಡಿ…!

ಕಾರ್ತಿಕ ಮಾಸದಲ್ಲಿ ಕಾವೇರಿ ನದಿ ನೀರಿನ ಸ್ನಾನದ ಮಹತ್ವ..!

ಕಾರ್ತಿಕ ಸೋಮವಾರ ಉಪವಾಸದ ನಿಯಮಗಳೇನು…?

 

- Advertisement -

Latest Posts

Don't Miss